ADVERTISEMENT

ಅಧಿವೇಶನದಲ್ಲಿ ಎನ್‍ಇಪಿ ಚರ್ಚೆಯಾಗಲಿ: ಎಸ್‍ಐಒ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:14 IST
Last Updated 21 ಸೆಪ್ಟೆಂಬರ್ 2020, 2:14 IST

ಬೆಂಗಳೂರು: 'ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು (ಎನ್‍ಇಪಿ) ಮುಕ್ತ ಚರ್ಚೆಗೆ ಒಳಪಡಿಸಬೇಕು' ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್‍ ಆಫ್ ಇಂಡಿಯಾದ (ಎಸ್‍ಐಒ) ರಾಜ್ಯ ಘಟಕದ ಅಧ್ಯಕ್ಷ ನಿಹಾಲ್ ಕಿದಿಯೂರು ಆಗ್ರಹಿಸಿದ್ದಾರೆ.

'ಪ್ರಜಾಪ್ರಭುತ್ವದಲ್ಲಿ ಯಾವುದೇ ಕಾನೂನು ಅಥವಾ ನೀತಿ ಜಾರಿ ಮಾಡುವ ಮುನ್ನ ಪ್ರಜೆಗಳು ಹಾಗೂ ಪ್ರತಿನಿಧಿಗಳ ನಡುವೆ ಮುಕ್ತ ಚರ್ಚೆ ಮತ್ತು ವಿಮರ್ಶೆಗೆ ಅವಕಾಶ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಎನ್‍ಇಪಿ ಜಾರಿ ಮಾಡಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ' ಎಂದು ದೂರಿದ್ದಾರೆ.

'ವಿಧಾನಮಂಡಲ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು. ಈ ಕುರಿತು ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹಾಕಬೇಕು' ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.