ADVERTISEMENT

‘ಉನ್ನತ ಶಿಕ್ಷಣದಲ್ಲಿ ಸೀಟು ಪಡೆಯಲು ಕೌಶಲ ಪರೀಕ್ಷೆ ಸಹಕಾರಿ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 21:43 IST
Last Updated 19 ಆಗಸ್ಟ್ 2020, 21:43 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

ಬೆಂಗಳೂರು: ‘ಉನ್ನತ ಶಿಕ್ಷಣದಲ್ಲಿ ಸೀಟು ಪಡೆಯಲು ಕನ್ನಡ ಭಾಷಾ ಕೌಶಲ ಆನ್‌ಲೈನ್ ಪರೀಕ್ಷೆ ಸಹಕಾರಿ ಆಗಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.

ವಿದೇಶಿ ಕನ್ನಡಿಗರೊಂದಿಗೆ ಪ್ರಾಧಿಕಾರವು ಬುಧವಾರ ಏರ್ಪಡಿಸಿದ್ದ ಆನ್‌ಲೈನ್‌ ಸಭೆಯಲ್ಲಿ ಮಾತನಾಡಿದ ಅವರು, ‘ಗಡಿನಾಡು ಹಾಗೂ ಹೊರದೇಶಗಳಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಕೆಯ ಬಗ್ಗೆ ದೃಢೀಕರಣ ಪತ್ರ ಒದಗಿಸಲು ಯೋಜನೆ ರೂಪಿಸಲಾಗಿದೆ. ಕನ್ನಡ ಭಾಷಾ ಕೌಶಲ ಆನ್‌ಲೈನ್‌ ಪರೀಕ್ಷೆಯು ಉನ್ನತ ಶಿಕ್ಷಣದಲ್ಲಿ ಸೀಟು ಪಡೆಯಲು ಮತ್ತು ಖಾಸಗಿ ವಲಯ ಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲುಸಹಕಾರಿಯಾಗಲಿದೆ’ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ‘ದೇಶ– ವಿದೇಶಗಳಲ್ಲಿ ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವವರಿಗೆ ಕನ್ನಡ ಕಲಿಕಾ ಪರೀಕ್ಷೆ ನಡೆಸುತ್ತಿರುವುದು ಹೊಸ ಪ್ರಯತ್ನವಾಗಿದೆ. ಸಂವಹನಕ್ಕೆ ಸಹಕಾರಿ ಯಾಗಬಲ್ಲ ಹಾಗೂ ದಿನನಿತ್ಯ ಬಳಕೆ ಮಾಡುವ ಪದಗಳ ಕುರಿತು ಡಿಜಿಟಲ್ ಪದಕೋಶ ರಚಿಸಬೇಕಿದೆ. ಹೊಸದಾಗಿ ಕನ್ನಡ ಕಲಿಯುವವರಿಗೆ ಉಪಯುಕ್ತವಾಗಲಿದೆ’ ಎಂದು ಅವರು ಅಭಿಪ್ರಾಯ ಪಟ್ಟರು.

ADVERTISEMENT

ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ, ಸದಸ್ಯರಾದ ಅಬ್ದುಲ್ ರೆಹಮಾನ್ ಪಾಷಾ, ಕಬ್ಬಿನಾಲೆ ವಸಂತ ಭಾರದ್ವಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.