ADVERTISEMENT

ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್ ಚಾವಣಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 17:37 IST
Last Updated 22 ಸೆಪ್ಟೆಂಬರ್ 2021, 17:37 IST

ಬೆಂಗಳೂರು: ಐದು ರಾಜ್ಯಗಳ 10 ಜಿಲ್ಲೆಗಳ 1,278 ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಚಾವಣಿ ಒದಗಿಸುವ ಕಾರ್ಯವನ್ನು ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ಸೆಲ್ಕೋ ಫೌಂಡೇಷನ್ ಮತ್ತು ಕ್ರಿಪ್ಟೋ ರಿಲೀಫ್ ಸಂಸ್ಥೆ ಆರಂಭಿಸಿವೆ.

ಮೊದಲ ಹಂತದಲ್ಲಿ ಮಣಿಪುರದಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಒಡಿಶಾ ರಾಜ್ಯದಲ್ಲೂ ಅನುಷ್ಠಾನಗೊಳ್ಳಲಿದೆ ಎಂದು ಸೆಲ್ಕೋ ಮತ್ತು ಕ್ರಿಪ್ಟೋ ರಿಲೀಫ್ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಇದರಿಂದ ಶೇ 50-60ರಷ್ಟು ವಿದ್ಯುತ್ ಬಳಕೆ ಕಡಿಮೆಯಾಗಲಿದೆ. 10 ಜಿಲ್ಲೆಗಳ 57 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಪ್ರಯೋಜನ ಆಗಲಿದೆ ಎಂದು ಸೆಲ್ಕೋ ಫೌಂಡೇಷನ್‍ನ ಸಿಇಒ ಡಾ. ಹರೀಶ್ ಹಂದೆ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.