ADVERTISEMENT

ದಸರಾ, ದೀಪಾವಳಿಗೆ 4 ವಿಶೇಷ ರೈಲು: ಇಲ್ಲಿದೆ ಮಾರ್ಗ ವಿವರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 19:30 IST
Last Updated 30 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದಸರಾ ಮತ್ತು ದೀಪಾವಳಿ ಪ್ರಯುಕ್ತ ಇನ್ನೂ ನಾಲ್ಕು ವಿಶೇಷ ರೈಲುಗಳ ಕಾರ್ಯಾಚರಣೆಗೆ ನೈರುತ್ಯ ರೈಲ್ವೆ ವ್ಯವಸ್ಥೆ ಮಾಡಿದೆ.

ಯಶವಂತಪುರ–ಕಣ್ಣೂರು, ಬೆಂಗಳೂರು ಕಂಟೋನ್ಮೆಂಟ್‌–ವಿಶಾಖಪಟ್ಟಣ, ಯಶವಂತಪುರ–ನರಸಾಪುರ, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್–ಜಸೀಡೀಹ್‌ಗೆ(ಜಾರ್ಖಂಡ್) ವಿಶೇಷ ರೈಲುಗಳು ಸಂಚರಿಸಲಿವೆ.

ಯಶವಂತಪುರ–ಕಣ್ಣೂರು ವಿಶೇಷ ರೈಲು(06283/06284) ಯಶವಂತಪುರದಿಂದ ಅ.5ರಂದು ಬೆಳಿಗ್ಗೆ 7.10ಕ್ಕೆ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಕಣ್ಣೂರು ತಲುಪಲಿದೆ. ಕಣ್ಣೂರಿನಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಯಶವಂತಪುರಕ್ಕೆ ಬರಲಿದೆ.

ADVERTISEMENT

ಕಂಟೋನ್ಮೆಂಟ್‌–ವಿಶಾಖಪಟ್ಟಣ ರೈಲು(08543/08544) ಅ.2ರಿಂದ ಅ.30ರವರೆಗೆ ವಾರಕ್ಕೊಮ್ಮೆ(ಭಾನುವಾರ) ಕಾರ್ಯಾಚರಣೆ ಮಾಡಲಿದೆ. ಮಧ್ಯಾಹ್ನ 3.50ಕ್ಕೆ ವಿಶಾಖಪಟ್ಟಣದಿಂದ ಹೊರಟು ಮರುದಿನ ಬೆಳಿಗ್ಗೆ 9.15ಕ್ಕೆ ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಅದೇ ರೀತಿ ಸೋಮವಾರ 3.50ಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 11ಕ್ಕೆ ವಿಶಾಖಪಟ್ಟಣ ತಲುಪಲಿದೆ.

ನರಸಾಪುರ(ತೆಲಂಗಾಣ)–ಯಶವಂತಪುರ ವಿಶೇಷ ರೈಲು(07153/07154) ಅ.2ರಂದು ಮಧ್ಯಾಹ್ನ 3.10ಕ್ಕೆ ನರಸಾಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.50ಕ್ಕೆ ಯಶವಂತಪುರಕ್ಕೆ ಬರಲಿದೆ. ಅದೇ ರೀತಿ ಸೋಮವಾರ ಮಧ್ಯಾಹ್ನ 3.50ಕ್ಕೆ ಯಶವಂತಪುರದಿಂದ ಹೊರಟು ನರಸಾಪುರಕ್ಕೆ ಬೆಳಿಗ್ಗೆ 8.30ಕ್ಕೆ ತಲುಪಲಿದೆ.

ವಾರಕ್ಕೊಮ್ಮೆ ಕಾರ್ಯಾಚರಣೆ ಮಾಡುವಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್–ಜಸೀಡೀಹ್‌ ರೈಲು(22306/22305), ಜಸೀಡೀಹ್‌ನಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಹೊರಟು ಶನಿವಾರ ರಾತ್ರಿ 8.15ಕ್ಕೆ ವಿಶೇಶ್ವರಯ್ಯ ಟರ್ಮಿನಲ್‌ಗೆ ಬರಲಿದೆ. ವಿಶ್ವೇಶ್ವರಯ್ಯ ನಿಲ್ದಾಣದಿಂದ ಭಾನುವಾರ ಬೆಳಿಗ್ಗೆ 10ಕ್ಕೆ ಹೊರಟು ಮಂಗಳವಾರ ರಾತ್ರಿ 12.55ಕ್ಕೆ ಜಸೀಡೀಹ್ ತಲುಪಲಿದೆ ಎಂದು ನೈರುತ್ಯ ರೈಲ್ವೆ ವೇಳಾಪಟ್ಟಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.