ADVERTISEMENT

ಎಸ್ಸೆಸ್ಸೆಲ್ಸಿ: ಉಚಿತ ಉಪನ್ಯಾಸ ತರಗತಿಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 21:18 IST
Last Updated 30 ಅಕ್ಟೋಬರ್ 2022, 21:18 IST
   

ಬೆಂಗಳೂರು: ಜನೋದಯ ಟ್ರಸ್ಟ್‌ ವತಿಯಿಂದ 2022–23ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಉಪನ್ಯಾಸ ತರಗತಿಗಳ (100 ದಿನಗಳ ಜ್ಞಾನ ಯಜ್ಞ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನ. 5ರಿಂದ ಬೆಳಿಗ್ಗೆ 6.30ರಿಂದ7.30ರವರೆಗೂ ಬಾಗಲಕುಂಟೆಯ ತ್ರಿವೇಣಿ ಪಬ್ಲಿಕ್ ಸ್ಕೂಲ್‌ನಲ್ಲಿ ತರಗತಿಗಳು ನಡೆಯಲಿವೆ. ನುರಿತ ಶಿಕ್ಷಕರಿಂದ ಉಪನ್ಯಾಸ ತರಗತಿಗಳು ನಡೆಯಲಿದ್ದು, ಆರ್ಥಿಕವಾಗಿ ಹಿಂದುಳಿದ ಆಸಕ್ತ ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆ
ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 9743770250, 9731396361ಗೆ ಸಂಪರ್ಕಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.