ADVERTISEMENT

ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ ಏರಿದ ಸೇಂಟ್ ಜೋಸೆಫ್ಸ್ ಕಾಲೇಜು: ವಿಕ್ಟರ್ ಲೋಬೋ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 2:59 IST
Last Updated 13 ಜುಲೈ 2022, 2:59 IST

ಬೆಂಗಳೂರು: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ (ರೂಸಾ–02) ಸೇಂಟ್‌ ಜೋಸೆಫ್ಸ್‌ (ಸ್ವಾಯತ್ತ) ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಉನ್ನತೀಕರಿಸಲಾಗಿದೆ.

ಸೇಂಟ್‌ ಜೋಸೆಫ್ಸ್‌ ಕಾಲೇಜಿಗೆ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ದಕ್ಕಿಸಿಕೊಡುವ ಪ್ರಕ್ರಿಯೆ 2013ರಿಂದ ಆರಂಭವಾಗಿತ್ತು. ರಾಜ್ಯ ಸರ್ಕಾರವು ಜುಲೈ 2, 2022ರಂದು ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಿಕ್ಟರ್‌ ಲೋಬೋ ಎಸ್.ಜೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2018ರಲ್ಲಿ ಆಯ್ಕೆಗೊಂಡ ಸ್ವಾಯತ್ತ ಕಾಲೇಜುಗಳ ಪೈಕಿ ಸೇಂಟ್ ಜೋಸೆಫ್ಸ್‌ ಕಾಲೇಜು ಮೊದಲನೆಯದಾಗಿದೆ. ರಾಜ್ಯ ಸರ್ಕಾರವು ಫೆಬ್ರುವರಿ 23, 2021ರಂದು ಇದನ್ನು ಅಂಗೀಕರಿಸಿ ಸೇಂಟ್ ಜೋಸೆಫ್ಸ್‌ ವಿಶ್ವವಿದ್ಯಾಲಯ ಅಧಿನಿಯಮ ಜಾರಿಗೊಳಿಸಿದೆ. ಸೇಂಟ್ ಜೋಸೆಫ್ಸ್‌ ವಿಶ್ವವಿದ್ಯಾಲಯವು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುತ್ತದೆ. ದೇಶದ ಎಲ್ಲಾ ನಾಗರಿಕರಿಗೆ ನೆರವಾಗುವಂತೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.