ADVERTISEMENT

ಹಣ ಮಾಡುವ ಜನಪ್ರತಿನಿಧಿಗಳನ್ನು ತಿರಸ್ಕರಿಸಿ: ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:21 IST
Last Updated 5 ಜನವರಿ 2026, 20:21 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ರಾಜರಾಜೇಶ್ವರಿನಗರ: ‘ಬಹುಮಹಡಿ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ, ಖಾತೆ ಮಾಡಿಸುವ ಮೂಲಕ ಬಿಲ್ಡರ್ ಮತ್ತು ಅಧಿಕಾರಿಗಳ ಮೂಲಕ ಹಣಮಾಡುತ್ತಿದ್ದವರನ್ನು ತಿರಸ್ಕರಿಸಿ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಮನವಿ ಮಾಡಿದರು.

ಕೆಂಗಲ್ ಹನುಮಂತಯ್ಯ ವಾರ್ಡ್‍ನ ವೈಟ್‍ಮೆಡೋಸ್ ಬಡಾವಣೆಯಲ್ಲಿ ಕಾವೇರಿ ನೀರಿನ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಯವಾಗಿ ಮಾತನಾಡಿ ಹಣ ಮಾಡುವ ಜನಪ್ರತಿನಿಧಿಗಳನ್ನು ಬೆಂಬಲಿಸಬೇಡಿ. ನಿಮ್ಮ ಸೇವೆಗೆ ಸೇವಕನಾಗಿ ದುಡಿಯುತ್ತಿರುವ ನಿಮ್ಮ ಮನೆಯ ಮಗನಿಗೆ ಮತ್ತಷ್ಟು ಶಕ್ತಿ ನೀಡಿದರೆ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುತ್ತೇನೆ’ ಎಂದರು.

ಯಲಚಗುಪ್ಪೆಯಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ , ಕುಂಬಳಗೋಡು ಗ್ರಾಮದಲ್ಲಿ ಸುಲಭ ಶೌಚಾಲಯ ಕಟ್ಟಡ ಜನಾರ್ಪಣೆ, ಮರಿಯಪ್ಪನ ಪಾಳ್ಯ ಜನತಾಕಾಲೊನಿ, ನಾಗದೇವನಹಳ್ಳಿಯ ಉಪಾಧ್ಯಲೇಔಟ್‍ನಲ್ಲಿ ಹಲವು ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ADVERTISEMENT

ಬಿಬಿಎಂಪಿ ಮಾಜಿ ಸದಸ್ಯ ಜಿ.ವಿ.ಸುರೇಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಶಿವಮಾದಯ್ಯ, ಯುವ ಕಾಂಗ್ರೆಸ್ ರಾಜ್ಯಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಅಮೃತ್‍ಗೌಡ, ವಾರ್ಡ್ ಅಧ್ಯಕ್ಷ ಎಸ್.ಟಿ.ಪ್ರಕಾಶ್‍ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಿದೇವಿ ಹಾಲಪ್ಪ, ಲಕ್ಷ್ಮಿ ಪ್ರಭುದೇವ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ರಮೇಶ್, ಚಾಮರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.