ADVERTISEMENT

ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 15:52 IST
Last Updated 15 ಅಕ್ಟೋಬರ್ 2025, 15:52 IST
   

ಬೆಂಗಳೂರು: ನಗರದ ಚಾಮರಾಜ ಪೇಟೆಯಲ್ಲಿರುವ ಸದಾತನ ಸಂಸ್ಥೆಯು ಶಾಲಾ ಶಿಕ್ಷಕರಲ್ಲಿ ಓದು ಮತ್ತು ಬರವಣಿಗೆ ಕೌಶಲವನ್ನು ಉತ್ತೇಜಿಸಲು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ‘ನೆಮ್ಮದಿಯ ಜೀವನಕ್ಕೆ ಸನಾತನ ಧರ್ಮದ ಮೌಲ್ಯಗಳು’ ವಿಷಯ ಕುರಿತು ಪ್ರಬಂಧವನ್ನು ಬರೆದು ಡಿಸೆಂಬರ್‌ 31ರ ಒಳಗೆ ಕಳುಹಿಸಬಹುದು. ಒಟ್ಟು 13 ಬಹುಮಾನಗಳಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಟ್ರಸ್ಟಿ ಕೆ.ಎಸ್.ಉಪಾಧ್ಯಾಯ ತಿಳಿಸಿದ್ದಾರೆ.

ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ 7483681708 ಸಂಪರ್ಕಿಸಲು ಕೋರಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.