ADVERTISEMENT

ನೋಂದಣಿ ಸಂಖ್ಯೆ ಕಾಣದಂತೆ ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 21:47 IST
Last Updated 29 ನವೆಂಬರ್ 2023, 21:47 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನೋಂದಣಿ ಸಂಖ್ಯೆ ಕಾಣದಂತೆ ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಪೂರ್ವ ವಿಭಾಗದ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ರಾಮಮೂರ್ತಿನಗರ ನಿವಾಸಿ ದಕ್ಷಿಣ ಮೂರ್ತಿ(23) ಮತ್ತು ಕೆ.ಆರ್.ಪುರ ನಿವಾಸಿ ಹರೀಶ್(30) ಬಂಧಿತರು.

ಆರೋಪಿಗಳಿಂದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇಬ್ಬರು ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೆ.ಆರ್.ಪುರ ಸಂಚಾರ ಠಾಣೆ ವ್ಯಾಪ್ತಿಯ ಹಳೇ ಮದ್ರಾಸ್ ಮುಖ್ಯ ರಸ್ತೆಯಲ್ಲಿ ನ.26ರಂದು ಬೆಳಿಗ್ಗೆ ಆರೋಪಿ ಹರೀಶ್ ತನ್ನ ಬೈಕ್‌ನ ನಂಬರ್ ಪ್ಲೇಟ್‌ಗೆ ಸ್ಟಿಕ್ಟರ್ ಅಂಟಿಸಿಕೊಂಡು ನಂಬರ್ ಕಾಣದಂತೆ ಮರೆ ಮಾಚಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ಸಾರ್ವಜನಿಕರೊಬ್ಬರು ಫೋಟೊ ತೆಗೆದು ನಗರ ಸಂಚಾರ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು. ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಸವಾರ ಹರೀಶ್‌ನನ್ನು ಬಂಧಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ರಾಮಮೂರ್ತಿನಗರ ಮುಖ್ಯ ರಸ್ತೆಯಲ್ಲಿ ಇದೇ ರೀತಿ ಮಾಡಿದ್ದ ಬೈಕ್ ಸವಾರ ದಕ್ಷಿಣ ಮೂರ್ತಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.