ಬೆಂಗಳೂರು: ಅಂಚೆ ಇಲಾಖೆ ವತಿಯಿಂದ ಚರ್ಚ್ ಸ್ಟ್ರೀಟ್ ಮೆಟ್ರೊ ನಿಲ್ದಾಣದ ಬಳಿ ಡಿ.22ರಂದು ಸಂಜೆ 5ಕ್ಕೆ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 5ರಿಂದ 8ರ ವರೆಗೆ ನಡೆಯಲಿರುವ ‘ಕರ್ನಾಪೆಕ್ಸ್–2024’ ರಾಜ್ಯ ಮಟ್ಟದ ಬೃಹತ್ ಅಂಚೆ ಚೀಟಿ ಸಂಗ್ರಹ ಮತ್ತು ಪ್ರದರ್ಶನ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಈ ಬೀದಿನಾಟಕವನ್ನು ಅಂಚೆ ಇಲಾಖೆಯ ಸಿಬ್ಬಂದಿ ಪ್ರದರ್ಶಿಸಲಿದ್ದಾರೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.