ಮಂಡ್ಯ: ಮೊಬೈಲ್ ಫೋನ್ ಹೆಚ್ಚು ಬಳಸದಂತೆ ಕುಟುಂಬ ಸದಸ್ಯರು ಬೈದಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಬೆಂಗಳೂರಿನ ಕೆ.ಭಾವನಾ (18) ನಗರದಲ್ಲಿ ರೈಲಿಗೆ ಸಿಲುಕಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದಲ್ಲಿದ್ದ ಅಜ್ಜಿ ಮನೆಗೆಂದು ಯಲಹಂಕ ರೈಲು ನಿಲ್ದಾಣದಿಂದ ಬಂದಿದ್ದ ಅವರು, ಅಲ್ಲಿಗೆ ಹೋಗಿರಲಿಲ್ಲ.‘ನಿಲ್ದಾಣ ಸಿಬ್ಬಂದಿ ಟ್ರ್ಯಾಕ್ ಪರಿ
ಶೀಲನೆ ನಡೆಸುವಾಗ ಮೃತದೇಹ ಪತ್ತೆಯಾಗಿದೆ. ಯಾವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದರು.
ಈ ಸಂಬಂಧ ರೈಲು ನಿಲ್ದಾಣದ ಹೊರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.