ADVERTISEMENT

‘ಮನೋವಿಜ್ಞಾನ ಅಧ್ಯಯನಕ್ಕೆ ಕನ್ನಡದಲ್ಲಿ ಅವಕಾಶ ಲಭ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:01 IST
Last Updated 24 ಜನವರಿ 2020, 23:01 IST
ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಕಲಬುರ್ಗಿ ಶರಣಬಸವೇಶ್ವರ ಕಲಾಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಆರ್.ವೆಂಕಟರೆಡ್ಡಿ, ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ ಕಾರ್ಯದರ್ಶಿ ಅನಿಲ್ ಗೋಕಾಕ್, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಷ್ಮಾ ಬಾವ್ಲೆ ಇದ್ದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮನೋವಿಜ್ಞಾನವನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ಹೆಚ್ಚು ಅವಕಾಶಗಳು ಲಭ್ಯವಾಗಬೇಕು’ ಎಂದು ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ ಆಯೋಜಿಸಿದ್ದ ಮನೋವಿಜ್ಞಾನಿ ಡಾ.ಎಂ.ಬಸವಣ್ಣ ಅವರ ‘ಸಿಗ್ಮಂಡ್ ಫ್ರಾಯ್ಡ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಈ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮನೋವಿಜ್ಞಾನಿಗಳು ಕನ್ನಡದಲ್ಲೇ ಬರೆದರೆ ಕಲಿಕೆಗೆ ಅನುಕೂಲವಾಗಲಿದೆ. ವಿಜ್ಞಾನವನ್ನು ಇಂಗ್ಲಿಷ್ ಬದಲು ಕನ್ನಡದಲ್ಲಿ ಕಲಿಯುವ ಪ್ರಯತ್ನಗಳು ನಡೆಯಬೇಕಿವೆ’ ಎಂದು ಹೇಳಿದರು.

ADVERTISEMENT

ಟ್ರಸ್ಟ್ ಕಾರ್ಯದರ್ಶಿ ಅನಿಲ್ ಗೋಕಾಕ್ ಮಾತನಾಡಿ, ‘ಇಂಗ್ಲಿಷ್ ಭಾಷೆಯನ್ನು ತ್ಯಜಿಸುವ ಉದ್ದೇಶ ಇದ್ದರೂ, ಅದನ್ನು ಚೆನ್ನಾಗಿ
ಕಲಿಯುವ ಅಗತ್ಯವಿದೆ. ಏಕೆಂದರೆ, ಇಂಗ್ಲಿಷ್‌ನಲ್ಲಿರುವ ವಿಜ್ಞಾನದ ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಬೇಕೆಂದರೆ ಇಂಗ್ಲಿಷ್ ಜ್ಞಾನ ಇರಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.