ADVERTISEMENT

ವಜ್ರಾಭರಣ ಮೇಳ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 18:56 IST
Last Updated 18 ಜನವರಿ 2019, 18:56 IST

ಬೆಂಗಳೂರು:ಹಲಸೂರು ರಸ್ತೆಯಲ್ಲಿರುವಸುಲ್ತಾನ್‌ ಡೈಮಂಡ್ಸ್‌ ಅಂಡ್‌ ಗೋಲ್ಡ್‌ ಆಭರಣಮಳಿಗೆಯಲ್ಲಿ ಜ.19ರಿಂದ ವಜ್ರಾಭರಣಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

‘ವಿಶ್ವ ವಜ್ರ’ ಹೆಸರಿನ ಈ ಮೇಳದಲ್ಲಿ ಇಟಲಿ, ಟರ್ಕಿ, ಫ್ರಾನ್ಸ್‌, ಬೆಲ್ಜಿಯಂ, ಅಮೆರಿಕ ಮತ್ತು ಸಿಂಗಾಪುರದಿಂದ ಆಮದು ಮಾಡಿಕೊಂಡಐಜಿಐ ಪ್ರಮಾಣೀಕೃತ 10,000ಕ್ಕೂ ಹೆಚ್ಚು ವಜ್ರಾಭರಣಗಳು ಪ್ರದರ್ಶನಗೊಳ್ಳಲಿವೆ. ಸದ್ಯಕ್ಕೆ ಟ್ರೆಂಡ್‌ನಲ್ಲಿರುವ ಆಭರಣಗಳು ಸಹ ಮೇಳದಲ್ಲಿ ಸಿಗಲಿವೆ. ನಟಿ ಪೂಜಾ ಗಾಂಧಿ ಶನಿವಾರ ಸಂಜೆ 4.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT