ADVERTISEMENT

‘ಶಿಕ್ಷಕರ ಕೊರತೆಯಿಂದಾಗಿ ಸಮೀಕ್ಷೆಗೆ ಹಿನ್ನಡೆ’: ಮಾಜಿ ಸಚಿವ ಎಚ್. ಆಂಜನೇಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 16:31 IST
Last Updated 18 ಜೂನ್ 2025, 16:31 IST
ಎಚ್. ಆಂಜನೇಯ ಅವರು ಹೂಡಿ ಗ್ರಾಮದಲ್ಲಿ ಸಮುದಾಯದ ಮುಖಂಡರಿಂದ ಮಾಹಿತಿ ಪಡೆದುಕೊಂಡರು
ಎಚ್. ಆಂಜನೇಯ ಅವರು ಹೂಡಿ ಗ್ರಾಮದಲ್ಲಿ ಸಮುದಾಯದ ಮುಖಂಡರಿಂದ ಮಾಹಿತಿ ಪಡೆದುಕೊಂಡರು   

ಕೆ.ಆರ್. ಪುರ: ‘ನಗರದಲ್ಲಿ ಸರ್ಕಾರಿ ಶಿಕ್ಷಕರ ಕೊರತೆಯಿಂದಾಗಿ ನಿರೀಕ್ಷೆಗೆ ತಕ್ಕಂತೆ ಸಮೀಕ್ಷೆಯಾಗಿಲ್ಲ. ಒಳ ಮೀಸಲಾತಿ ಸಮೀಕ್ಷೆಗೆ ಹಿನ್ನೆಡೆಯಾಗಿದೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಮಹದೇವಪುರ ಕ್ಷೇತ್ರದ ಹೂಡಿ, ಸಾದರಮಂಗಲ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾದಿಗ ಸಮುದಾಯದ ಮನೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಬಿಎಂಪಿ ಸಿಬ್ಬಂದಿ ಹಾಗೂ ಇನ್ನೂ ಕೆಲವು ಇಲಾಖೆಗಳನ್ನು ಬಳಸಿಕೊಂಡು ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ’ ಎಂದರು.

ADVERTISEMENT

‘ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಯಶಸ್ವಿಯಾಗಿಲ್ಲ. 700ಕ್ಕೂ ಹೆಚ್ಚು ಕೊಳೆಗೇರಿಗಳಲ್ಲಿ ಮಾದಿಗ ಜನಾಂಗವಿದ್ದು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದಾರೆ. ಬೆಳಿಗ್ಗೆ ಎಂಟು ಗಂಟೆಗೆ ಕೆಲಸ ಹೊರಡುವ ಜನರು ಸಂಜೆ ನಂತರ ಮನೆಗೆ ಹಿಂದಿರುಗುತ್ತಾರೆ. ಅವರು ಮನೆಯಲ್ಲಿರುವ ಸಮಯದಲ್ಲಿ ಸಮೀಕ್ಷೆ ಆಗುತ್ತಿಲ್ಲ’ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಹೂಡಿ ರಾಮಚಂದ್ರ, ಹೂಡಿ ಮಂಜುನಾಥ್, ಕೃಷ್ಣಮೂರ್ತಿ, ವಿಕ್ರಮ್, ಆಟೊ ಸೀನು, ಆಂಜಿನಪ್ಪ ಯಾದವ್, ಮುನಿರಾಜು, ಮಾದೇಶ್, ನಾಗರಾಜ್, ಶ್ರೀಕಾಂತ್, ನಾರಾಯಣಸ್ವಾಮಿ ಉಪಸ್ಥಿತದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.