ADVERTISEMENT

ನೀರಿನ ಅಭಾವ ತಡೆಗೆ ಕ್ರಮ ವಹಿಸಿ: ಸಚಿವ ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 21:05 IST
Last Updated 21 ಫೆಬ್ರುವರಿ 2021, 21:05 IST
ನೂತನ ಕಚೇರಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು. ಸುರೇಶ್, ಎಸ್ .ಜಿ.ನಾಗರಾಜ್ ಇದ್ದರು.
ನೂತನ ಕಚೇರಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು. ಸುರೇಶ್, ಎಸ್ .ಜಿ.ನಾಗರಾಜ್ ಇದ್ದರು.   

ಕೆ.ಆರ್.ಪುರ: ನೀರಿನ ಅಭಾವ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚಿಸಿದರು.

ಕ್ಷೇತ್ರದ ಎ.ನಾರಾಯಣಪುರದಲ್ಲಿ ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಬೇಸಿಗೆ ಸನ್ನಹಿತವಾಗಿರುವ ಹಿನ್ನೆಲೆ ಕ್ಷೇತ್ರದಲ್ಲಿ ನೀರಿನ ಅಭಾವ ಬಾರದಂತೆ ಮುನ್ನೆಚ್ಚೆರಿಕಾ ಕ್ರಮಗಳನ್ನ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾರ್ವಜನಿಕರು ಕೂಡಾ ಅನಾವಶ್ಯಕವಾಗಿ ನೀರನ್ನು ಪೋಲು ಮಾಡದೇ ಮಿತವಾಗಿ ಬಳಸುವಂತೆ ಮನವಿ ಮಾಡಿದರು.

ADVERTISEMENT

ರಾಜ್ಯ‌ ಬಿಜೆಪಿ ಮಹಿಳಾ‌ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಬಾಬು, ಸುರೇಶ್, ಎಸ್ .ಜಿ.ನಾಗರಾಜ್, ಅಧಿಕಾರಿಗಳಾದ ವೆಂಕಟೇಶ್, ಪ್ರದೀಪ್, ವೆಂಕಟರಮಣಪ್ಪ, ಎಸ್. ಸಿ. ನಾಯಕ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.