ADVERTISEMENT

ಟಿಸಿಎಸ್‌ ಟೆಕ್‌ ಬೈಟ್ಸ್‌: ಪಿಇಎಸ್‌ ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:35 IST
Last Updated 14 ಮಾರ್ಚ್ 2020, 22:35 IST
ಪ್ರೀತಂ ಉಪಾಧ್ಯ, ಅಖಿಲ್ ಸಿದ್ಧಾರ್ಥ್‌ ಅವರಿಗೆ ಚೆಕ್‌ ವಿತರಿಸಲಾಯಿತು.
ಪ್ರೀತಂ ಉಪಾಧ್ಯ, ಅಖಿಲ್ ಸಿದ್ಧಾರ್ಥ್‌ ಅವರಿಗೆ ಚೆಕ್‌ ವಿತರಿಸಲಾಯಿತು.   

ಬೆಂಗಳೂರು: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಸಂಸ್ಥೆಯು ಇತ್ತೀಚೆಗೆ ನಡೆಸಿದ ‘ಟಿಸಿಎಸ್‌ ಟೆಕ್ ಬೈಟ್ಸ್‌’ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಪಿಇಎಸ್‌ ವಿಶ್ವವಿದ್ಯಾಲಯದ ಪ್ರೀತಂ ಉಪಾಧ್ಯ ಹಾಗೂಅಖಿಲ್ ಸಿದ್ಧಾರ್ಥ್‌ ತಂಡ ಮೊದಲ ಸ್ಥಾನ ಪಡೆದಿದೆ.

ಪ್ರೀತಂ ಉಪಾಧ್ಯ ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗದ 8ನೇ ಸೆಮಿಸ್ಟರ್‌ ಹಾಗೂ ಅಖಿಲ್ ಸಿದ್ಧಾರ್ಥ್‌ ಎಲೆಕ್ಟ್ರಾನಿಕ್ ಸಂವಹನ ಎಂಜಿನಿಯರಿಂಗ್ ವಿಭಾಗದ 8ನೇ ಸೆಮಿಸ್ಟರ್‌ ವಿದ್ಯಾರ್ಥಿ.

ಬೆಂಗಳೂರು ಸುತ್ತಿನ ಸ್ಫರ್ಧೆಯಲ್ಲಿ 200ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಬಹುಮಾನವಾಗಿ ₹75 ಸಾವಿರ ನಗದು ಹಾಗೂ ಇಬ್ಬರಿಗೂ ಟ್ಯಾಬ್‌ ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.