ADVERTISEMENT

ತೆರಿಗೆ ಪಾವತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST

ಬೆಂಗಳೂರು:ಬೆಂಗಳೂರು ಅರಮನೆ ಮೈದಾನದ 28 ಎಕರೆ ಜಮೀನಿಗೆ ಸಂಬಂಧಿಸಿದಂತೆ ₹ 183.33 ಕೋಟಿಯಷ್ಟು ಸಂಪತ್ತು ತೆರಿಗೆ ಪಾವತಿಸುವಂತೆ ಮೈಸೂರು ರಾಜಮನೆತನದ ಸಹೋದರಿಯರಾದ ಮೀನಾಕ್ಷಿದೇವಿ ಹಾಗೂ ಕಾಮಾಕ್ಷಿದೇವಿ ಅವರಿಗೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಈ ಕುರಿತಂತೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಬೆಂಗಳೂರು ಅರಮನೆ ಮೈದಾನದ 28 ಎಕರರ ಜಮೀನನ್ನು ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ 1999-2000ರಿಂದ 2004-2005ರ ಅವಧಿಗೆ ₹ 183.33 ಕೋಟಿ ಸಂಪತ್ತು ತೆರಿಗೆ ಪಾವತಿಸಬೇಕು’ ಎಂದು ರಾಜಮನೆತನದ ಸಹೋದರಿಯರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಮೀನಾಕ್ಷಿ ದೇವಿ ಹಾಗೂ ಕಾಮಾಕ್ಷಿ ದೇವಿ ಆದಾಯ ತೆರಿಗೆ ಇಲಾಖೆ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.