ಬೆಂಗಳೂರಿನಲ್ಲಿ ಟೆಕಿ ಆತ್ಮಹತ್ಯೆ ಪ್ರಕರಣ
(ಚಿತ್ರ ಕೃಪೆ: ಎಕ್ಸ್ ಸ್ಕ್ರೀನ್‌ಶಾಟ್)
ಜೋನಪುರ(ಉತ್ತರ ಪ್ರದೇಶ): ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಅವರ ಪತ್ನಿ ನಿಖಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿರುವ ಬೆಂಗಳೂರು ಪೊಲೀಸರು, ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬೆಳಿಗ್ಗೆ 11ರ ಸುಮಾರಿಗೆ ಉತ್ತರ ಪ್ರದೇಶದ ಜೋನಪುರದ ಖೋವಾ ಮಂಡಿ ಪ್ರದೇಶದಲ್ಲಿರುವ ನಿಖಿತಾ ನಿವಾಸದ ಬಳಿಗೆ ಆಗಮಿಸಿದ ಇನ್ಸ್‌ಪೆಕ್ಟರ್ ಸಂಜೀತ್ ಕುಮಾರ್ ನೇತೃತ್ವದ 4 ಸದಸ್ಯರ ಬೆಂಗಳೂರು ಪೊಲೀಸರ ತಂಡ ನಿಖಿತಾ ನಿವಾಸಕ್ಕೆ ಸಮನ್ಸ್ ಅಂಟಿಸಿದೆ.
‘ಆಕೆಯ ಪತಿ ಟಿಕಿ ಅತುಲ್ ಆತ್ಮಹತ್ಯೆಯ ಸಾಂದರ್ಭಿಕ ಸಾಕ್ಷ್ಯಾಧಾರಗಳ ಹಿನ್ನೆಲೆ ನಿಖಿತಾ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು’ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಆಯುಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ನಿಖಿತಾ ಕುಟುಂಬ ಸದಸ್ಯರಾದ ತಾಯಿ ನಿಶಾ ನಿಂಘಾನಿಯಾ, ಚಿಕ್ಕಪ್ಪ ಸುಶಿಲ್ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹೆಸರುಗಳಿದ್ದರೂ ನಿಕಿತಾಗೆ ಮಾತ್ರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಸಮನ್ಸ್‌ನಲ್ಲಿ ಮನೆಯ ಇತರೆ ಸದಸ್ಯರ ಹೆಸರುಗಳಿಲ್ಲ.
ಸಮನ್ಸ್ ಮನೆಯ ಗೋಡೆಗೆ ಅಂಟಿಸುವ ವೇಳೆ ಮನೆಯಲ್ಲಿ ಯಾವೊಬ್ಬ ಸದಸ್ಯರೂ ಇರಲಿಲ್ಲ ಎಂದು ವರದಿ ತಿಳಿಸಿದೆ.
ಗುರುವಾರ ತಡರಾತ್ರಿ ಜೋನಪುರಕ್ಕೆ ಆಗಮಿಸಿದ ಬೆಂಗಳೂರು ಪೊಲೀಸರ ತಂಡ ಎಸ್‌ಪಿ ಅಜಯ್ ಪಾಲ್ ಶರ್ಮಾ ಅವರ ಜೊತೆ ಮಾತುಕತೆ ನಡೆಸಿ ಬಳಿಕ ಮನೆಗೆ ಸಮನ್ಸ್ ಅಂಟಿಸಿದ್ದಾರೆ.
ನಿಖಿತಾ ವಿರುದ್ಧ ಈ ಹಿಂದೆ ಯಾವುದಾದರೂ ಪ್ರಕರಣ ದಾಖಲಾಗಿಯೇ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ಸಿಟಿ ಸಿವಿಲ್ ನ್ಯಾಯಾಯಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.
34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಜಿ ಪತ್ನಿ ಮತ್ತು ಅವರ ಕುಟುಂಬದ ಕಿರುಕುಳದಿಂದ ಬೇಸತ್ತು ಅತುಲ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ಜೋನಪುರ(ಉತ್ತರ ಪ್ರದೇಶ): ಟೆಕಿ ಅತುಲ್ ಸುಭಾಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಅವರ ಪತ್ನಿ ನಿಕಿತಾ ಸಿಂಘಾನಿಯಾಗೆ ಸಮನ್ಸ್ ಜಾರಿ ಮಾಡಿರುವ ಬೆಂಗಳೂರು ಪೊಲೀಸರು, ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬೆಳಿಗ್ಗೆ 11ರ ಸುಮಾರಿಗೆ ಉತ್ತರ ಪ್ರದೇಶದ ಜೋನಪುರದ ಖೋವಾ ಮಂಡಿ ಪ್ರದೇಶದಲ್ಲಿರುವ ನಿಕಿತಾ ನಿವಾಸದ ಬಳಿಗೆ ಆಗಮಿಸಿದ ಇನ್ಸ್‌ಪೆಕ್ಟರ್ ಸಂಜೀತ್ ಕುಮಾರ್ ನೇತೃತ್ವದ 4 ಸದಸ್ಯರ ಬೆಂಗಳೂರು ಪೊಲೀಸರ ತಂಡ ನಿಕಿತಾ ನಿವಾಸಕ್ಕೆ ಸಮನ್ಸ್ ಅಂಟಿಸಿದೆ.
‘ಆಕೆಯ ಪತಿ ಟಿಕಿ ಅತುಲ್ ಆತ್ಮಹತ್ಯೆಯ ಸಾಂದರ್ಭಿಕ ಸಾಕ್ಷ್ಯಾಧಾರಗಳ ಹಿನ್ನೆಲೆ ನಿಖಿತಾ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು’ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಆಯುಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿ ನಿಕಿತಾ ಕುಟುಂಬ ಸದಸ್ಯರಾದ ತಾಯಿ ನಿಶಾ ನಿಂಘಾನಿಯಾ, ಚಿಕ್ಕಪ್ಪ ಸುಶಿಲ್ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹೆಸರುಗಳಿದ್ದರೂ ನಿಕಿತಾಗೆ ಮಾತ್ರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಸಮನ್ಸ್‌ನಲ್ಲಿ ಮನೆಯ ಇತರೆ ಸದಸ್ಯರ ಹೆಸರುಗಳಿಲ್ಲ.
ಸಮನ್ಸ್ ಮನೆಯ ಗೋಡೆಗೆ ಅಂಟಿಸುವ ವೇಳೆ ಮನೆಯಲ್ಲಿ ಯಾವೊಬ್ಬ ಸದಸ್ಯರೂ ಇರಲಿಲ್ಲ ಎಂದು ವರದಿ ತಿಳಿಸಿದೆ.
ಗುರುವಾರ ತಡರಾತ್ರಿ ಜೋನಪುರಕ್ಕೆ ಆಗಮಿಸಿದ ಬೆಂಗಳೂರು ಪೊಲೀಸರ ತಂಡ ಎಸ್‌ಪಿ ಅಜಯ್ ಪಾಲ್ ಶರ್ಮಾ ಅವರ ಜೊತೆ ಮಾತುಕತೆ ನಡೆಸಿ ಬಳಿಕ ಮನೆಗೆ ಸಮನ್ಸ್ ಅಂಟಿಸಿದ್ದಾರೆ.
ನಿಕಿತಾ ವಿರುದ್ಧ ಈ ಹಿಂದೆ ಯಾವುದಾದರೂ ಪ್ರಕರಣ ದಾಖಲಾಗಿಯೇ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ಸಿಟಿ ಸಿವಿಲ್ ನ್ಯಾಯಾಯಕ್ಕೆ ಹೋಗುವ ಯೋಜನೆಯಲ್ಲಿದ್ದಾರೆ.
34 ವರ್ಷದ ಟೆಕ್ಕಿ ಅತುಲ್ ಸುಭಾಶ್ ಡಿಸೆಂಬರ್ 9ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಜಿ ಪತ್ನಿ ಮತ್ತು ಅವರ ಕುಟುಂಬದ ಕಿರುಕುಳದಿಂದ ಬೇಸತ್ತು ಅತುಲ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.