ADVERTISEMENT

ಟೆಂಡರ್ ಮೊತ್ತ ಹೆಚ್ಚಾಗಿಲ್ಲ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 20:34 IST
Last Updated 23 ಜೂನ್ 2022, 20:34 IST
ಸಚಿವ ವಿ.ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳ ಜತೆ ಗುರುವಾರ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದರು
ಸಚಿವ ವಿ.ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳ ಜತೆ ಗುರುವಾರ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದರು   

ಬೆಂಗಳೂರು: ‘ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವರನಗರ ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಹೆಚ್ಚಿಸಿರುವ ಟೆಂಡರ್ ಮೊತ್ತವನ್ನು ಹೊಸ ಎಸ್‌ಆರ್‌ ದರಕ್ಕೆ ಹೋಲಿಸಿದರೆ ಶೇ 2ರಷ್ಟು ಕಡಿಮೆ ಇದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ಸುದ್ದಿಗಾರರ ಜತೆ ಮಾತನಾಡಿದರು. 2018ರ ಎಸ್‌ಆರ್‌ ದರದಲ್ಲಿ ಅಂದಾಜು ಮಾಡಿದಾಗ ₹17.21 ಕೋಟಿ ಇತ್ತು. ಈಗ ₹20.9‌2 ಕೋಟಿಗೆ ಏರಿಸಲಾಗಿದೆ. ಹಾಗಾಗಿ ಶೇ 21ರಷ್ಟು ಹೆಚ್ಚಾಗಿದೆ ಎಂದು
ಹೇಳಲು ಆಗುವುದಿಲ್ಲ. ಈಗ ಕಬ್ಬಿಣ, ಸಿಮೆಂಟ್ ಎಲ್ಲಾ ದರವೂ ಹೆಚ್ಚಾಗಿದೆ. ಈಗಿನ ಎಸ್‌ಆರ್‌ ದರಕ್ಕೆ ಹೋಲಿಸಿದರೆ ಇನ್ನೂ ಕಡಿಮೆಯೇ ಇದೆ’ ಎಂದು ಹೇಳಿದರು.

‘ಟೆಂಡರ್ ಯಾವ ಕಂಪನಿಗೇ ಸಿಗಲಿ, ಕಾಮಗಾರಿಯನ್ನು ಬೇರೆ ಕಂಪನಿಯೇ ನಿರ್ವಹಿಸಲಿ, ಅದು
ಮುಖ್ಯ ಅಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿದೆಯೇ ಎಂಬುದಷ್ಟೇ ಮುಖ್ಯ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಎರಡು ತಿಂಗಳಲ್ಲಿ ಸೇತುವೆ ನಿರ್ಮಾಣ ಆಗಲಿದೆ’ ಎಂದು
ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.