ADVERTISEMENT

ಶ್ರೀಗಂಧ ಮರ ಕಳವು; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:55 IST
Last Updated 8 ಜನವರಿ 2021, 16:55 IST
ಜಪ್ತಿ ಮಾಡಲಾದ ಶ್ರೀಗಂಧ ಮರದ ತುಂಡುಗಳು
ಜಪ್ತಿ ಮಾಡಲಾದ ಶ್ರೀಗಂಧ ಮರದ ತುಂಡುಗಳು   

ಬೆಂಗಳೂರು: ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

‘ರಾಜೇಶ್, ಲೋಕೇಶ್, ಗೋವಿಂದರಾಜು ಹಾಗೂ ಎಂ.ಎಸ್. ರವಿ ಬಂಧಿತರು. ಅವರಿಂದ ₹ 9.79 ಕೋಟಿ ಮೌಲ್ಯದ 178 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಚನ್ನಸಂದ್ರದ ಕಲಾ ಫಾರ್ಮ್‌ನಲ್ಲಿದ್ದ 2 ಶ್ರೀಗಂಧದ ಮರಗಳನ್ನು ಕಳೆದ ಸೆಪ್ಟೆಂಬರ್ 11ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಡಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

’ಕಲಾ ಫಾರ್ಮ್‌ ಬಳಿ ಬೆಳಿಗ್ಗೆ ಓಡಾಡಿದ್ದ ಆರೋಪಿಗಳು, ಶ್ರೀಗಂಧ ಮರ ಇದ್ದ ಬಗ್ಗೆ ತಿಳಿದುಕೊಂಡಿದ್ದರು. ರಾತ್ರಿ ವೇಳೆ ಕಲಾ ಫಾರ್ಮ್‌ಗೆ ನುಗ್ಗಿ ಮರ ಕಡಿದು ಸಾಗಿಸಿದ್ದರು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.