ADVERTISEMENT

ಆಗ್ರಾದಲ್ಲಿ ಬೆಳ್ಳಿ ಕದ್ದವ ನಗರದಲ್ಲಿ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:37 IST
Last Updated 21 ಮೇ 2019, 19:37 IST
ಮಹೇಂದ್ರ
ಮಹೇಂದ್ರ   

ಬೆಂಗಳೂರು: ಆಗ್ರಾದಲ್ಲಿ 250 ಕೆ.ಜಿ ಬೆಳ್ಳಿ ದರೋಡೆ ಮಾಡಿ ನಗರದಲ್ಲಿ ತಲೆಮರೆಸಿಕೊಂಡಿದ್ದ ಎಚ್‌.ಮಹೇಂದ್ರ ಸಿಂಗ್ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ.

‘ಆಗ್ರಾದ ಬೇರಿಚಹಾರ್ ಗ್ರಾಮದ ಮಹೇಂದ್ರ, ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯ ಒಂದರಲ್ಲಿ ಸೆಕ್ಯುರಿಟಿ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ. ನಗರಕ್ಕೆ ಬಂದಿದ್ದ ಆಗ್ರಾ ಪೊಲೀಸರೇ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮಹೇಂದ್ರ ಸೇರಿದಂತೆ 12 ಮಂದಿಯ ಗ್ಯಾಂಗ್, ಆಗ್ರಾದ ಸಿಕಂದರ್ ಬಳಿ ಏಪ್ರಿಲ್ 20ರಂದು ಕೊರಿಯರ್ ಕಂಪನಿಯೊಂದರ ವಾಹನ ಅಡ್ಡಗಟ್ಟಿತ್ತು. 250 ಕೆ.ಜಿ ಬೆಳ್ಳಿ ಸಾಮಗ್ರಿಗಳಿದ್ದ 25 ಪಾರ್ಸೆಲ್‌ಗಳನ್ನು ದರೋಡೆ ಮಾಡಿತ್ತು’ ಎಂದರು.

ADVERTISEMENT

ಸ್ಥಳೀಯರ ಬಳಿ ಸತ್ಯ ಬಾಯ್ಬಿಟ್ಟ: ‘ದರೋಡೆ ಬಳಿಕ ಆಗ್ರಾ ತೊರೆದು ನಗರಕ್ಕೆ ಬಂದಿದ್ದ ಮಹೇಂದ್ರ, ‘ನಾನು ಯಾರು ಗೊತ್ತಾ? ಆಗ್ರಾದಲ್ಲಿ ಬೆಳ್ಳಿ ಕದ್ದಿದ್ದೆ. ಇದುವರೆಗೂ ನನ್ನನ್ನು ಪೊಲೀಸರು ಹಿಡಿಯಲು ಆಗಿಲ್ಲ’ ಎಂಬು ದಾಗಿ ಹೇಳುತ್ತಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ಆತನ ಮಾತು ಕೇಳಿದ್ದ ಸ್ಥಳೀಯ ರೊಬ್ಬರು, ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು.ಹೊಯ್ಸಳ ವಾಹನದ ಸಿಬ್ಬಂದಿ, ಆತ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದರೋಡೆ ವಿಷಯ ಬಾಯ್ಬಿಟ್ಟ. ಬಳಿಕವೇ ಆಗ್ರಾ ಪೊಲೀ ಸರಿಗೆ ಮಾಹಿತಿ ನೀಡಲಾಗಿತ್ತು’ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.