ADVERTISEMENT

ಬೆಂಗಳೂರು: ಚಿನ್ನಾಭರಣ ಕದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:19 IST
Last Updated 24 ಜೂನ್ 2021, 6:19 IST
ಜಪ್ತಿ ಮಾಡಲಾದ ಚಿನ್ನದ ಸರ ಮತ್ತು ಉಂಗುರ
ಜಪ್ತಿ ಮಾಡಲಾದ ಚಿನ್ನದ ಸರ ಮತ್ತು ಉಂಗುರ   

ಬೆಂಗಳೂರು: ಪರಿಚಯಸ್ಥರು ಊರಿಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಂದ್ರಹಳ್ಳಿ ನಿವಾಸಿ ಲಕ್ಷ್ಮೀನಾರಾಯಣ (25) ಬಂಧಿತ ಆರೋಪಿ.

‘ದೂರುದಾರರಿಗೆ ಪರಿಚಿತನಾಗಿದ್ದ ಲಕ್ಷ್ಮೀನಾರಾಯಣ ಆಗಾಗ ಮನೆಗೆ ಬಂದು ಹೋಗುತ್ತಿದ್ದ.ಕಳೆದ ಡಿಸೆಂಬರ್‌ನಲ್ಲಿ ದೂರುದಾರರು ಊರಿಗೆ ತೆರಳಿದ್ದಾಗ ಮನೆಯಲ್ಲಿದ್ದ ₹1.25 ಲಕ್ಷ ಬೆಲೆ ಬಾಳುವ ಚಿನ್ನದ ಸರ ಹಾಗೂ ಚಿನ್ನದ ಉಂಗುರ ಕಳವಾಗಿತ್ತು’.

ADVERTISEMENT

‘ಈ ಸಂಬಂಧ ಮನೆಯವರು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು. ಲಕ್ಷ್ಮೀನಾರಾಯಣನ ಮೇಲೆ ಸಂಶಯ ಇರುವುದಾಗಿಯೂ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಲಕ್ಷ್ಮೀನಾರಾಯಣನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ, ಕಳವಾಗಿದ್ದ ಚಿನ್ನದ ಸರ ಹಾಗೂ ಉಂಗುರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.