ADVERTISEMENT

ವಾಕಿಟಾಕಿ ಹಿಡಿದು ಕಳವು; ಕೊಲಂಬಿಯಾ ಕಳ್ಳರ ಗ್ಯಾಂಗ್ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 10:58 IST
Last Updated 30 ಜುಲೈ 2020, 10:58 IST
ವಶಪಡಿಸಿಕೊಂಡ ಆಭರಣಗಳು
ವಶಪಡಿಸಿಕೊಂಡ ಆಭರಣಗಳು   

ಬೆಂಗಳೂರು: ವಾಕಿಟಾಕಿ ಹಿಡಿದು ಪರಸ್ಪರ ಸಂಪರ್ಕ ಸಾಧಿಸಿ ಆಧುನಿಕ ಉಪಕರಣ ಬಳಸಿಕೊಂಡು ಮನೆಗಳಲ್ಲಿ ಕಳವು ಮಾಡುತ್ತಿದ್ದ ಕೊಲಂಬಿಯಾ ಪ್ರಜೆಗಳ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ವಿಲಿಯನ್ ಪಡಿಲ್ಲಾ ಮಾರ್ಟಿನೇಜ್ (48), ಸ್ಟೆಫನಿಯಾ ಮೋನ್‌ಸಾಲ್ವೆ (23) ಹಾಗೂ ಕ್ರಿಶ್ಚಿಯಾನಾ ಯೇನಿಸ್ ನವರೊ ಒಲಾರ್ಥೆ (34) ಬಂಧಿತರು. ಇವರು ನಗರದಲ್ಲಿ 31 ಕಡೆ ಕೃತ್ಯ ಎಸಗಿದ್ದರು.

'ನಟ ಶಿವರಾಜ್‌ಕುಮಾರ್ ಅವರ ಮನೆಯ ಪಕ್ಕದ ಮನೆಯಲ್ಲೂ ಆರೋಪಿಗಳು ಕೃತ್ಯ ಎಸಗಿದ್ದರು. ಸೈಕಲ್‌ನಲ್ಲು ಸುತ್ತಾಡುತ್ತಿದ್ದ ಆರೋಪಿಗಳು, ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು' ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ADVERTISEMENT

'ರಾತ್ರಿ ಮನೆ ಬಳಿ ಹೋಗುತ್ತಿದ್ದ ಆರೋಪಿಗಳು, ಪರಸ್ಪರ ವಾಕಿಟಾಕಿಯಲ್ಲೇ ಮಾತನಾಡುತ್ತಿದ್ದರು. ಆಧುನಿಕ ಉಪಕರಣದಿಂದ ಮನೆಗಳ ಬಾಗಿಲು ತೆರೆಯುತ್ತಿದ್ದರು. ನಗದು, ಚಿನ್ನ ಕದ್ದುಕೊಂಡು ಪರಾರಿಯಾಗುತ್ತಿದ್ದರು. ಈ ಹಿಂದೆಯೂ ಜಯನಗರ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.