ರೈಲು
ಬೆಂಗಳೂರು: ಉತ್ತರ ಮಧ್ಯ ರೈಲ್ವೆ ವಲಯದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಯಶವಂತಪುರದಿಂದ ಲಖನೌಗೆ ಹೋಗುವ ಮತ್ತು ಅಲ್ಲಿಂದ ವಾಪಸ್ ಬರುವ ರೈಲುಗಳು ಪ್ರಯಾಗರಾಜ್ ಸಹಿತ ವಿವಿಧ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
ಕುಂಭಮೇಳ ನಡೆಯುತ್ತಿರುವುದರಿಂದ ಪ್ರಯಾಗರಾಜ್ ನಿಲ್ದಾಣದಲ್ಲಿ ಇಳಿಯುವವರ ಮತ್ತು ಹತ್ತುವವರ ಸಂಖ್ಯೆ ಹೆಚ್ಚಾಗಿ ಇರುತ್ತಿತ್ತು. ಫೆಬ್ರುವರಿ 24ರಂದು ಯಶವಂತಪುರದಿಂದ ಹೊರಡುವ ಹಾಗೂ ಫೆ. 20 ಮತ್ತು 27ರಂದು ಲಖನೌ ನಿಲ್ದಾಣದಿಂದ ಯಶವಂತಪುರಕ್ಕೆ ಹೊರಡುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಓಹಾನ್ ಕ್ಯಾಬಿನ್, ಬಾಂಡಾ, ಭೀಮಸೇನ್, ಕಾನ್ಪುರ ಸೆಂಟ್ರಲ್ ಮೂಲಕ ಸಂಚರಿಸಿ ಲಖನೌ ತಲುಪಲಿದೆ. ಹೀಗಾಗಿ ಈ ರೈಲಿನ ನೈನಿ, ಪ್ರಯಾಗರಾಜ್, ಮಾ ಬೆಲ್ಹಾ ದೇವಿ ಧಾಮ್ ಪ್ರತಾಪಗಢ, ಅಮೇಠಿ ಮತ್ತು ರಾಯ್‌ಬರೇಲಿ ನಿಲ್ದಾಣಗಳಲ್ಲಿನ ನಿಯಮಿತ ನಿಲುಗಡೆ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.