ADVERTISEMENT

ಸಂಚಾರ ನಿಯಮ ಉಲ್ಲಂಘನೆ: 1,995 ಪ್ರಕರಣ ದಾಖಲು, ₹10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:41 IST
Last Updated 2 ಜುಲೈ 2025, 14:41 IST
   

ಬೆಂಗಳೂರು: ಪಶ್ಚಿಮ ವಿಭಾಗದ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿ 1,995 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ₹10 ಲಕ್ಷ ದಂಡ ವಿಧಿಸಲಾಗಿದೆ. 

ನಿರ್ಬಂಧಿತ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ 363 ಪ್ರಕರಣ ದಾಖಲಿಸಿಕೊಂಡು ₹2.23 ಲಕ್ಷ ದಂಡ ವಿಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ ಆಟೊ ಚಾಲಕರ ವಿರುದ್ಧ 213 ಪ್ರಕರಣ ದಾಖಲಿಸಿಕೊಂಡು ₹ 69 ಸಾವಿರ ದಂಡ ಹಾಕಲಾಗಿದೆ.  ಏಕಮುಖ ಸಂಚಾರ ಮಾರ್ಗದಲ್ಲಿ ಚಾಲನೆ ಮಾಡಿದ ಚಾಲಕರ ವಿರುದ್ಧ 39 ಪ್ರಕರಣ ದಾಖಲಿಸಿ ₹19 ಸಾವಿರ ದಂಡ ವಿಧಿಸಲಾಗಿದೆ.

ನಿರ್ಬಂಧಿತ ಮಾರ್ಗದಲ್ಲಿ ತೆರಳಿದ ಚಾಲಕರ ವಿರುದ್ಧ 177 ಪ್ರಕರಣ ದಾಖಲಿಸಿಕೊಂಡು ₹ 85 ಸಾವಿರ ದಂಡ ಸಂಗ್ರಹ ಮಾಡಲಾಗಿದೆ. ಇತರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 1,135 ಪ್ರಕರಣ ದಾಖಲಿಸಿಕೊಂಡು ₹5.68 ಲಕ್ಷ ದಂಡ ವಿಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ (ಸಂಚಾರ) ಅನಿತಾ ಬಿ. ಹದ್ದಣ್ಣವರ್‌ ತಿಳಿಸಿದ್ದಾರೆ.

ADVERTISEMENT

ವಾಹನ ಜಪ್ತಿ, ಎಫ್‌ಐಆರ್‌ ದಾಖಲು: ವ್ಹೀಲಿ ಮಾಡುತ್ತಿದ್ದ ಬಿ.ಆದಿತ್ಯ(18) ವಿರುದ್ಧ ಬಿಎನ್‌ಎಸ್‌ ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಮಾಗಡಿ ರಸ್ತೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಗಡಿ ಮುಖ್ಯರಸ್ತೆಯಲ್ಲಿ ಸ್ಕೂಟರ್‌ ಮುಂಭಾಗದ ಚಕ್ರವನ್ನು ಮೇಲಕ್ಕೆ ಎತ್ತಿ ಅಪಾಯಕಾರಿಯಾಗಿ ಆರೋಪಿ ವ್ಹೀಲಿ ಮಾಡುತ್ತಿದ್ದ. ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.