ADVERTISEMENT

ಸಂಚಾರ ನಿಯಮ ಉಲ್ಲಂಘನೆ, ದಂಡ; ಬೆಂಗಳೂರು ಸಂಚಾರ ಪೊಲೀಸರಿಂದ ಎಚ್ಚರಿಕೆಯ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2025, 5:00 IST
Last Updated 9 ಏಪ್ರಿಲ್ 2025, 5:00 IST
<div class="paragraphs"><p><a href="https://x.com/blrcitytraffic">@blrcitytraffic</a></p></div>

ಬೆಂಗಳೂರು: ನಗರದಲ್ಲಿ ಕಾರಿನಲ್ಲಿ ಚಲಿಸುವಾಗ ಸಂಚಾರ ನಿಯಮ ಉಲ್ಲಂಘಿಸಿ ಸನ್‌ ರೂಫ್‌ನಿಂದ ಹೊರಗೆ ನಿಂತು ಪ್ರಯಾಣಿಸುತ್ತಿದ್ದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನ ಅಧಿಕೃತ ಖಾತೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

'ಒಂದು ತಪ್ಪು ನಡೆಯಿಂದಾಗಿ ಅಪಾಯಗಳು ಎದುರಾಗಬಹುದು. ಮನರಂಜನೆಗಾಗಿ ಈ ರೀತಿ ವರ್ತನೆ ಸರಿಯಿಲ್ಲ. ಇದು ಎಲ್ಲರಿಗೂ ಅಪಾಯಕಾರಿ. ರೋಮಾಂಚನಕ್ಕಾಗಿ ಜೀವಗಳನ್ನು ಪಣಕ್ಕಿಡಬೇಡಿ' ಎಂದು ಪೊಲೀಸರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿಡಿಯೊದಲ್ಲಿ ಕಾಣಿಸಿಕೊಂಡ ದೃಶ್ಯಗಳನ್ನು ಆಧರಿಸಿ, ಆರ್‌.ಟಿ ನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಅಜಾರೂಕತೆಯಿಂದ ವಾಹನೆ ಚಾಲನೆ ಮಾಡಿದ ಸವಾರನ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಕೊಂಡು ದಂಡ ವಿಧಿಸಿದ್ದು, ಇದು ಟಿಕೆಟ್‌ ಅಲ್ಲ. ಪ್ರಕರಣಕ್ಕೆ ದಂಡ ವಿಧಿಸಲಾಗಿದೆ ಎಂದೂ ತಿಳಿಸಲಾಗಿದೆ.

'ಬೆಂಗಳೂರು ಸಂಚಾರ ಪೊಲೀಸರು' ಖಾತೆಯು ಸಂಚಾರ ನಿಯಮ, ಸುರಕ್ಷತೆಗೆ ಜಾಗೃತಿ ಮೂಡಿಸುವುದರ ಜತೆಗೆ ಟ್ರಾಫಿಕ್‌ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.