ADVERTISEMENT

ಭೂಮಿ ಪೂಜೆ ಕಾರ್ಯಕ್ರಮ: ಸಂಚಾರ ಮಾರ್ಗ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:44 IST
Last Updated 26 ಜೂನ್ 2025, 15:44 IST
<div class="paragraphs"><p>ಪ್ರಯಾಗರಾಜ್‌ನತ್ತ ತೆರಳುತ್ತಿರುವ ವಾಹನಗಳು</p></div>

ಪ್ರಯಾಗರಾಜ್‌ನತ್ತ ತೆರಳುತ್ತಿರುವ ವಾಹನಗಳು

   

ಪಿಟಿಐ ಚಿತ್ರ

ಪ್ರಜಾವಾಣಿ ವಾರ್ತೆ

ADVERTISEMENT

ಬೆಂಗಳೂರು: ಬಾಬು ಜಗಜೀವನ್‌ ರಾಮ್‌ ಭವನದ ಬಳಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಕಟ್ಟಡದ ನಿರ್ಮಾಣಕ್ಕೆ ಜೂನ್‌ 27ರಂದು ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮನಹಳ್ಳಿ ಜಂಕ್ಷನ್ ಹಾಗೂ ಲಗ್ಗೆರೆ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 

ಅಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಮನಹಳ್ಳಿ ಜಂಕ್ಷನ್‌ ಹಾಗೂ ಲಗ್ಗೆರೆ ಕಡೆಗೆ ಹೋಗುವ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಹಳೇ ರಿಂಗ್ ರಸ್ತೆಯಲ್ಲಿ ಕೆಂಗೇರಿ, ಕೆಂಗುಂಟೆ ಕಡೆಯಿಂದ ಬರುವ ಬಿಎಂಟಿಸಿ ಮತ್ತು ಇತರೆ ವಾಹನಗಳು, ಗೊರುಗುಂಟೆಪಾಳ್ಯದ ಕಡೆಗೆ ಹೋಗಲು ಸುಮನಹಳ್ಳಿ ಜಂಕ್ಷನ ಕಡೆಗೆ ಬರದೆ ಪಾಪರೆಡ್ಡಿಪಾಳ್ಯ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ರವಿ ಜಿಮ್ ಜಂಕ್ಷನ್ ಮೂಲಕ ರಾಜ್‌ಕುಮಾರ್‌ ರಿಂಗ್ ರಸ್ತೆಯಲಿ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಸಂಚರಿಸಬಹುದಾಗಿದೆ. 

ಮಾಗಡಿ ಮುಖ್ಯರಸ್ತೆಯಲ್ಲಿ ಬಂದು ಲಗ್ಗೆರೆ ಕಡೆ ಹೋಗಬೇಕಾದ ಎಲ್ಲಾ ವಾಹನಗಳು (ಎಚ್‌ಜಿವಿ ವಾಹನಗಳನ್ನು ಹೊರತು ಪಡಿಸಿ) ಸುಂಕದಕಟ್ಟೆ ನಂತರ ಎಡಕ್ಕೆ ತಿರುವು ಪಡೆದು ಪೈಪ್‌ಲೈನ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ಸುಂಕದಕಟ್ಟೆ ಕಡೆಯಿಂದ ಬರುವ ಭಾರಿ ವಾಹನಗಳು ಶ್ರೀಗಂಧಕಾವಲು ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಹಳೇ ರಿಂಗ್ ರಸ್ತೆ – ಕಣ್ವ ಡಯಾಗ್ನಸ್ಟಿಕ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ರಿಂಗ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ಸುಮನಹಳ್ಳಿ ಜಂಕ್ಷನ್ ಬಳಿ ಲಗ್ಗೆರೆ ಕಡೆಗೆ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ ಅವಧಿಯಲ್ಲಿ ವಾಹನ ಸವಾರರು ಮಾಗಡಿ ರಸ್ತೆಯಲ್ಲಿ ಕಾಮಾಕ್ಷಿಪಾಳ್ಯ – ಕೆಎಚ್‌ಬಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಸಿದ್ದಯ್ಯ ಪುರಾಣಿಕ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ಸುಮನಹಳ್ಳಿ ಜಂಕ್ಷನ್‌, ಶ್ರೀಗಂಧ ಕಾವಲು ಜಂಕ್ಷನ್‌ ಮತ್ತು ಪಾಪರೆಡ್ಡಿ ಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುವುದು. ಕಾರು ಮತ್ತು ಬೈಕ್‍ಗಳಲ್ಲಿ ಕಾರ್ಯಕ್ರಮಕ್ಕೆ ಬಂದವರಿಗೆ ಕೇಂದ್ರ ಪರಿಹಾರ ಸಮಿತಿ ಆವರಣ ಹಾಗೂ ವಿಐಪಿ ವಾಹನಗಳಿಗೆ ಬಾಬು ಜಗಜೀವನ್‌ ರಾಮ್‌ ಭವನದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಬಸ್ ಮತ್ತು ಇತರೆ ಸಾರ್ವಜನಿಕ ವಾಹನಗಳಿಗೆ ಪೈಪ್‍ಲೈನ್ ರಸ್ತೆಯ ಪಿಳ್ಳಯ್ಯನ ಕಟ್ಟೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.