ADVERTISEMENT

ಯಲಹಂಕ–ಮಾಕಳಿದುರ್ಗ ರೈಲು ಮಾರ್ಗ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 21:37 IST
Last Updated 8 ಜನವರಿ 2021, 21:37 IST
ಯಲಹಂಕ– ಮಾಕಳಿದುರ್ಗ ನಡುವಿನ ವಿದ್ಯುದೀಕರಣಗೊಂಡ ರೈಲು ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು
ಯಲಹಂಕ– ಮಾಕಳಿದುರ್ಗ ನಡುವಿನ ವಿದ್ಯುದೀಕರಣಗೊಂಡ ರೈಲು ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದರು   

ಬೆಂಗಳೂರು: ಯಲಹಂಕ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿದುರ್ಗ ನಡುವಿನ ದ್ವಿಪಥ ವಿದ್ಯುದೀಕರಣ ರೈಲು ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.

ರೈಲ್ವೆ ಸುರಕ್ಷತಾ ಆಯುಕ್ತ ಅಭಯಕುಮಾರ್ ರೈ ಅವರು ಗುರುವಾರ ವಿದ್ಯುದೀಕರಣ ಮಾರ್ಗದ ಸುರಕ್ಷತೆ ಪರಿಶೀಲಿಸಿದರು.

ಯಲಹಂಕ ಮತ್ತು ಮಾಕಳಿದುರ್ಗ ನಡುವಿನ 34 ಕಿಲೋ ಮೀಟರ್‌ನಲ್ಲಿ ಮಾರ್ಗದಲ್ಲಿ ಅವರು ನಡೆಸಿದ ವೇಗದ ಪರೀಕ್ಷೆ ಯಶಸ್ವಿಯಾಗಿದೆ. ಶುಕ್ರವಾರದಿಂದ ಈ ಮಾರ್ಗ ಸಂಚಾರಕ್ಕೆ ಮುಕ್ತಗೊಂಡಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

2015-16ರಲ್ಲಿ ಉದ್ದೇಶಿತ ಮಾರ್ಗಕ್ಕೆ ಅನುಮೋದನೆ ದೊರಕಿತ್ತು. ನಾಲ್ಕು ವರ್ಷಗಳ ಕಾಮಗಾರಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.