ADVERTISEMENT

ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:51 IST
Last Updated 15 ಸೆಪ್ಟೆಂಬರ್ 2020, 19:51 IST

ಬೆಂಗಳೂರು: ಇಂಟರ್‌ನ್ಯಾಷನಲ್‌ ಇನ್‍ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ (ಐಐಬಿಎಸ್) ವತಿಯಿಂದ ನಾಗರಿಕ ಸೇವಾ ಪರೀಕ್ಷೆಗಳಿಗೆ ಉಚಿತ ಶಿಕ್ಷಣ ಹಾಗೂತರಬೇತಿ ನೀಡಲು ‘ಪಿಜಿಡಿಎಂ ಮತ್ತು ಸಿವಿಲ್ ಸರ್ವಿಸ್ ಕೋಚಿಂಗ್ ಸ್ಕಾಲರ್‌ಶಿಪ್‌ ಟೆಸ್ಟ್’ನಡೆಸಲಾಗುವುದು.

ಪರೀಕ್ಷೆಯಲ್ಲಿ ಮೊದಲ 20 ರ‍್ಯಾಂಕ್‌ ಪಡೆದವರಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಯುಪಿಎಸ್‍ಸಿ ಕೋಚಿಂಗ್ ವ್ಯವಸ್ಥೆ ಇರಲಿದೆ.

ಮೂರನೇ ರ‍್ಯಾಂಕ್‌ವರೆಗೆ ಶೇ 60 ರಷ್ಟು ವಿದ್ಯಾರ್ಥಿವೇತನ, 4ರಿಂದ 10ನೇ ರ‍್ಯಾಂಕ್‌ವರೆಗೆ ಶೇ 50ರಷ್ಟು ವಿದ್ಯಾರ್ಥಿ ವೇತನ, 11ರಿಂದ 15ರವರೆಗೆ ಶೇ 30 ಹಾಗೂ 16ರಿಂದ 20ನೇ ರ‍್ಯಾಂಕ್‌ ವರೆಗೆ ಶೇ 25ರಷ್ಟು ವಿದ್ಯಾರ್ಥಿ
ವೇತನದೊಂದಿಗೆ ಪಿಜಿಡಿಎಂ ಕೋರ್ಸ್, ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಆನ್‍ಲೈನ್ ಮೂಲಕ ಇದೇ 20 ರಂದು ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನ. ಸಂಪರ್ಕ:80884 22547/45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.