ADVERTISEMENT

ಥಾಮಸ್‌ ಕುಕ್‌ನಿಂದ ‘ಟ್ರಾವೆಲ್ ಮೇಳ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 20:35 IST
Last Updated 29 ಜನವರಿ 2026, 20:35 IST
   

ಬೆಂಗಳೂರು: ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್‌ ಆಯೋಜಿಸುವ ‘ಟ್ರಾವೆಲ್ ಮೇಳ’ವು ನಗರದಲ್ಲಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಡೆಯಲಿದೆ.

ರಾಜಾಜಿನಗರದ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಹಾಗೂ ವಿಟ್ಠಲ ಮಲ್ಯ ಆಸ್ಪತ್ರೆಯ ಎದುರಿನ ಐಬಿಸ್ ಸೆಂಟ್ರಲ್ ಹೋಟೆಲ್‌ನಲ್ಲಿ ಈ ಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೈಲಾಸ–ಮಾನಸ ಸರೋವರ ಯಾತ್ರೆ, ಚಾರ್‌ ಧಾಮ್ ಯಾತ್ರೆ, ಕಾಶಿ–ಅಯೋಧ್ಯೆ ಯಾತ್ರೆ
ಸೇರಿದಂತೆ ಕೆಲವು ಯಾತ್ರೆಗಳ ಬಗ್ಗೆ ಮಾಹಿತಿ ಒದಗಿಸಲಾಗು ತ್ತದೆ. ಯೂರೋಪ್, ಅಮೆರಿಕ, ದಕ್ಷಿಣ ಅಮೆರಿಕ, ಕೆನಡಾ, ದುಬೈ,  ಥಾಯ್ಲೆಂಡ್‌, ಸಿಂಗಪುರ, ಬಾಲಿ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಪ್ರವಾಸದ ಬಗ್ಗೆ ಮಾಹಿತಿ ಇರಲಿದೆ.

ADVERTISEMENT

ಕಾರ್ಯಕ್ರಮದ ವೇಳೆ ಪ್ರವಾಸ ತಜ್ಞರಿಂದ ಮಾರ್ಗದರ್ಶನ, ವಿಶೇಷ ಕೊಡುಗೆಗಳ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಅಶೋಕ ಸೋಮಯಾಜಿ (99640 27269), ಪಾಂಡುರಂಗ (96209 99066) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.