ADVERTISEMENT

ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಗೆ ಟಿ.ಎಸ್. ಲತಾ ನೇಮಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 23:10 IST
Last Updated 28 ಏಪ್ರಿಲ್ 2025, 23:10 IST
   

ಬೆಂಗಳೂರು: ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಅಧಿಕಾರಿ ಲತಾ ಟಿ.ಎಸ್. ಅವರು ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್‌ಸಿಐ) ದೇಶದ್ಯಾಂತ 85 ಶಾಖೆಗಳನ್ನು ಹೊಂದಿದೆ. ಅಲ್ಲದೇ ಸಿಂಗಪುರ, ಲಂಡನ್, ಶ್ರೀಲಂಕಾ, ದುಬೈ, ನೇಪಾಳ, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ಅಂತರರಾಷ್ಟ್ರೀಯ ಶಾಖೆಗಳನ್ನು ಹೊಂದಿದೆ. ಯಂಗ್‌ ಕಮ್ಯುನಿಕೇಟರ್‌ ಕ್ಲಬ್‌ಗಳು (ವೈಸಿಸಿ) ದೇಶದ 70ಕ್ಕೂ ಹೆಚ್ಚು ಕಾಲೇಜುಗಳಲ್ಲಿ‌ವೆ ಎಂದು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಮುಖ್ಯಸ್ಥ ಎಂ.ಬಿ.ಜಯರಾಂ, ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಗೀತಾ ಶಂಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT