ADVERTISEMENT

94 ಸಾವಿರ ಮಂದಿಯಲ್ಲಿ ಕ್ಷಯ ಪತ್ತೆ

1 ಕೋಟಿ ಜನರ ಆರೋಗ್ಯ ಮಾಹಿತಿ ಕಲೆಹಾಕಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:37 IST
Last Updated 27 ಜುಲೈ 2019, 19:37 IST

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಭಿಯಾನದಲ್ಲಿ 94,516 ಮಂದಿಗೆ ಕ್ಷಯ ರೋಗ (ಟಿ.ಬಿ) ಇರುವುದು ಬೆಳಕಿಗೆ ಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 13.42 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 3,178 ಮಂದಿಯಲ್ಲಿ ಕ್ಷಯ ಇರುವುದು ತಿಳಿದುಬಂದಿದೆ.

ರಾಯಚೂರು (10,476), ಕೊಪ್ಪಳ(8,561), ಕಲಬುರ್ಗಿ (7,561), ಬೆಳಗಾವಿ (7,163), ಬಳ್ಳಾರಿ (5,698), ಹಾವೇರಿ (4,473), ಚಿತ್ರದುರ್ಗ (3,930), ಉಡುಪಿ (3,523) ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಇರುವುದು ಕಂಡುಬಂದಿದೆ.

ADVERTISEMENT

ರಾಜ್ಯದ 30 ಜಿಲ್ಲೆಗಳಲ್ಲಿ ಇಲಾಖೆ ಜುಲೈ15ರಿಂದ ಅಭಿಯಾನವನ್ನು ನಡೆಸಿತ್ತು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಒಟ್ಟು 1.06 ಕೋಟಿ ಮಂದಿಯ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಅಭಿಯಾನದ ವೇಳೆ 9,650 ಮಂದಿ ಸರ್ಕಾರಿ ಆಸ್ಪತ್ರೆ ಹಾಗೂ 655 ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ 2025ರ ವೇಳೆಗೆ ‘ಕ್ಷಯ ಮುಕ್ತ ಭಾರತ’ವನ್ನು ನಿರ್ಮಿಸುವ ಗುರಿ ಹೊಂದಿದ್ದು, ರೋಗಪತ್ತೆಯಾದಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.