ADVERTISEMENT

ರಾಜ್ಯಪಾಲರ ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:33 IST
Last Updated 27 ಆಗಸ್ಟ್ 2022, 19:33 IST
   

ಬೆಂಗಳೂರು: ರಾಜ್ಯಪಾಲರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಗರದ ಜ್ಞಾನ ಪ್ರಕಾಶ್ ಹಾಗೂ ದೆಹಲಿಯ ಗಿರಿಧರ್ ಝಾ ಬಂಧಿತರು. ಇಂಡಿಯನ್ ಜರ್ನಲಿಸ್ಟ್ ಕಾಂಪೆಂಡಿಯಂ (ಐಜೆಸಿ) ಸಂಸ್ಥೆ
ಸ್ಥಾಪಿಸಿಕೊಂಡಿದ್ದ ಆರೋಪಿಗಳು, ಅದರ ಮೂಲಕ ಪ್ರಶಸ್ತಿ–ಪುರಸ್ಕಾರ ನೀಡುವ ಆಮಿಷವೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದರೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿಜೆಪಿ ಮುಖಂಡರೂ ಆಗಿರುವ ಪೀಣ್ಯ ಕೈಗಾರಿಕಾ ಪ್ರದೇಶದ ದೂರು
ದಾರ ವೆಂಕಟೇಶ್ ಅವರನ್ನು ಸಂಪರ್ಕಿ
ಸಿದ್ದ ಆರೋಪಿಗಳು, ‘ಐಜೆಸಿ ಸಂಸ್ಥೆಯ ಪರವಾಗಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಆಗಸ್ಟ್ 16ರಂದು ಬೆಳಿಗ್ಗೆ 11 ಗಂಟೆಗೆ ರಾಜಭವನದಲ್ಲಿ ಪ್ರಶಸ್ತಿ ಕೊಡಿಸುತ್ತೇವೆ. ನೀವು ನಮ್ಮ ಸಂಸ್ಥೆಗೆ ದೇಣಿಗೆ ನೀಡಬೇಕು’ ಎಂದಿದ್ದರು. ಅದನ್ನು ನಂಬಿದ್ದ ವೆಂಕಟೇಶ್, ₹ 1 ಲಕ್ಷ ನೀಡಿದ್ದರು.’

ADVERTISEMENT

‘ಹಣ ಪಡೆದಿದ್ದ ಆರೋಪಿಗಳು, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆಂದು ದೂರುದಾರ ವೆಂಕಟೇಶ್ ಅವರನ್ನು ಆಗಸ್ಟ್ 16ರಂದು ರಾಜಭವನಕ್ಕೆ ಕರೆಸಿದ್ದರು. ಆದರೆ, ಯಾವುದೇ ಸಮಾರಂಭ ನಡೆದಿರಲಿಲ್ಲ. ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಲು ರಾಜ್ಯಪಾಲರು ನೀಡಿದ್ದ ಸಮಯ ಅದಾಗಿತ್ತಷ್ಟೆ. ವಂಚನೆ ಗಮನಕ್ಕೆ ಬರುತ್ತಿದ್ದಂತೆ ವೆಂಕಟೇಶ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.