ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿ 15 ದಿನಗಳಿಗೊಮ್ಮೆ ನಗರ ವೀಕ್ಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಈ ವೇಳೆ ಅವರು ಕೆಂಪೇಗೌಡ ಪಶ್ಚಿಮ ಗಡಿ ಗೋಪುರ ವೀಕ್ಷಿಸಬೇಕು’ ಎಂದು ಉದಯಭಾನು ಕಲಾಸಂಘ ಮನವಿ ಮಾಡಿದೆ.
ಈ ಗಡಿಗೋಪುರ ಅಲ್ಲದೆ, ಗವಿಗಂಗಾಧರ ಸ್ವಾಮಿ ದೇಗುಲ, ಕೆಂಪಾಂಬುಧಿ ಕೆರೆ ಪರಿಸರ, ಜಿಂಕೆ ಉದ್ಯಾನವನ್ನು ವೀಕ್ಷಿಸಿ, ಅದರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಹೇಳಿದೆ.
ಪಶ್ಚಿಮ ಗಡಿ ಗೋಪುರ ಪ್ರದೇಶವನ್ನು ಪುರಾತತ್ವ ಐತಿಹಾಸಿಕ ಸಂರಕ್ಷಿತ ಪ್ರದೇಶ ಎಂದು ದಾಖಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದೂ ಸಂಘವು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.