ADVERTISEMENT

ಯುಜಿಸಿ ವೇತನದಾರರಿಗೆ ತುಟ್ಟಿ ಭತ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 20:09 IST
Last Updated 31 ಅಕ್ಟೋಬರ್ 2018, 20:09 IST

ಬೆಂಗಳೂರು: 2006ರ ಪರಿಷ್ಕೃತ ಯುಜಿಸಿ, ಎಐಸಿಟಿಇ ಹಾಗೂ ಐಸಿಎಆರ್ ವೇತನ ಶ್ರೇಣಿ ಪಡೆಯುತ್ತಿರುವ ಬೋಧಕ ಸಿಬ್ಬಂದಿ ಹಾಗೂ ಎನ್‍ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆ ದರವನ್ನು ಮೂಲ ವೇತನದ ಶೇ 142ರಿಂದ ಶೇ 148ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು 2018ರ ಜುಲೈ 1ರಿಂದ ಜಾರಿಗೆ ಬರಲಿದೆ.

ನಾನ್ ಗವರ್ನ್‍ಮೆಂಟ್ ಪೆನ್ಷನ್‌ ಸ್ಕೀಮ್‌ನ ನಿವೃತ್ತಿ ವೇತನದಾರರಿಗೆ ಸದ್ಯ ಲಭ್ಯವಿರುವ ತುಟ್ಟಿ ಭತ್ಯೆ ದರವನ್ನು ಸಹ ಮೂಲ ನಿವೃತ್ತಿ ವೇತನದ ಶೇ 142ರಿಂದ 148ಕ್ಕೆ ಹೆಚ್ಚಿಸಲಾಗಿದೆ.ತುಟ್ಟಿ ಭತ್ಯೆಯನ್ನು ಸಂಭಾವನೆಯ ಅಂಶವಾಗಿ ತೋರಿಸುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT