ಬೆಂಗಳೂರು: ಯಲಹಂಕ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಏಳು ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವು ಮಾಡಲಾಗಿದೆ ಎಂದು ಯಲಹಂಕ ವಲಯ ಆಯುಕ್ತ ಕರೀಗೌಡ ತಿಳಿಸಿದರು.
ಕೋಗಿಲು ವಾರ್ಡ್ ಮಿಟ್ಟಗಾನಹಳ್ಳಿ ವೃತ್ತದ ಬಳಿ ಸತ್ಯನಾರಾಯಣ ಅವರು ನಿರ್ಮಿಸುತ್ತಿರುವ ನಿವೇಶನ ಸಂಖ್ಯೆ 3,, ದಾಸರಹಳ್ಳಿ ವಾರ್ಡ್ ಗ್ರಾಮದ ಅರ್ಕಾವತಿ ಲೇಔಟ್ 10ನೇ ಬ್ಲಾಕ್‌ನಲ್ಲಿ ನಿರ್ಮಾಣ ಕಟ್ಟಡ, ದೊಡ್ಡಬೊಮ್ಮಸಂದ್ರದಲ್ಲಿ ಸುನಿಲ್ ಅವರು ನಿವೇಶನ ಖಾತಾ ಸಂಖ್ಯೆ 141/141/142/142/143/143/1ರಲ್ಲಿ, ಭದ್ರಪ್ಪ ಬಡಾವಣೆಯ ಮಾರುತಿನಗರ 5ನೇ ಅಡ್ಡರಸ್ತೆಯಲ್ಲಿ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಗಿದೆ ಎಂದರು.
ಎನ್‌ಟಿಐ ಬಡಾವಣೆಯ ಫೇಸ್ 2ರಲ್ಲಿ, ಥಣಿಸಂದ್ರ ಗ್ರಾಮದ ಅರ್ಕಾವತಿ ಬಡಾವಣೆಯ 14ನೇ ಬ್ಲಾಕ್‌ನಲ್ಲಿ ನಿವೇಶನ ಸಂಖ್ಯೆ 2, 81/3ಎನಲ್ಲಿ ಮೊಹಮ್ಮದ್ ಫೈಸಲ್ ಸಬ್ ಸೈಯದ್ ಅಬ್ದುಲ್ ರವುಫ್ ಜಿ.ಪಿ.ಎ ಹೋಲ್ಡರ್ ಮೊಹಮ್ಮದ್ ಗೌಸ್ ಅಬ್ದುಲ್ ಅವರ ಕಟ್ಟಡ, ನ್ಯಾಯಾಂಗ ಬಡಾವಣೆಯಲ್ಲಿ ಪಿಐಡಿ ನಂ. 41/41/103ರಲ್ಲಿ ಕೃಷ್ಣಮೂರ್ತಿ ಅವರು ನಿರ್ಮಿಸುತ್ತಿರುವ ಕಟ್ಟಡದ ವ್ಯತಿರಿಕ್ತ ಭಾಗವನ್ನು ತೆರವುಗೊಳಿಸಲಾಯಿತು ಎಂದು ಕರೀಗೌಡ ಮಾಹಿತಿ ನೀಡಿದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಕ್ಷೆ ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಈ ವಾರದಲ್ಲಿ 50 ಕಟ್ಟಡಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕರೀಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.