ಬೆಂಗಳೂರು: 'ರಾಜಕಾರಣಿಗಳ ಒತ್ತಡದಿಂದ ಕುಲಪತಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
ಮಾಜಿ ಕುಲಪತಿಗಳ ವೇದಿಕೆ ನಗರದ ಅರಮನೆ ರಸ್ತೆಯ ಹಳೆ ಕಾನೂನು ಕಾಲೇಜು ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ವಿಶ್ವವಿದ್ಯಾಲಯಗಳು ಸ್ವಾಯತ್ತೆಯನ್ನು ಕಳೆದುಕೊಂಡಿವೆ. ಪಾರದರ್ಶಕತೆ ಇಲ್ಲ. ಭ್ರಷ್ಟಾಚಾರ, ಪಕ್ಷಪಾತ ಹೆಚ್ಚಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿವೆ' ಎಂದು ಹೇಳಿದರು.
ವಿಶ್ರಾಂತ ಕುಲತಿಗಳಾದ ಎಂ.ಎನ್.ಶೀಲವಂತರ್, ಬಿ.ಎಸ್.ಶೇರಿಗಾರ, ಜೆ.ಎಚ್.ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಎಚ್.ಮಹೇಶಪ್ಪ, ಖಜಾಂಚಿ ಎಸ್. ಸಚ್ಚಿದಾನಂದ, ಕೆ.ನಾರಾಯಣಗೌಡ, ಪದ್ಮಾಶೇಖರ್, ಬಿ.ಜಿ.ಸಂಗಮೇಶ್ವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.