ADVERTISEMENT

ಬೆಂಗಳೂರು | ವಾಣಿಜ್ಯ ಸೇವೆಗೆ ಬಳಕೆ: 21 ಖಾಸಗಿ ವಾಹನಗಳ ವಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 16:21 IST
Last Updated 25 ಆಗಸ್ಟ್ 2025, 16:21 IST
   

ಬೆಂಗಳೂರು: ಹೆಚ್ಚುವರಿ ಆದಾಯಕ್ಕಾಗಿ ತಮ್ಮ ಖಾಸಗಿ ಕಾರುಗಳನ್ನು ಆ್ಯಪ್ ಮೂಲಕ ಬಾಡಿಗೆಗೆ ನೀಡುತ್ತಿರುವುದನ್ನು ಪತ್ತೆಹಚ್ಚಿರುವ ಕಸ್ತೂರಿನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

‘ಐಟಿ–ಬಿಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಅವರ ಖಾಸಗಿ ಬಳಕೆಯ ಕಾರುಗಳನ್ನು ಝೂಮ್‌ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ವಾಣಿಜ್ಯ ಸಂಚಾರಕ್ಕೆ ಬಳಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಅದಕ್ಕಾಗಿ ನಾವೇ ಆ್ಯಪ್‌ನಲ್ಲಿ ಬಾಡಿಗೆಗೆ ವಾಹನ ಬುಕ್‌ ಮಾಡಿ ಪರೀಕ್ಷೆ ನಡೆಸಿದ್ದೆವು. ವಾಣಿಜ್ಯ ಸಂಚಾರಕ್ಕೆ ಬಳಸುವ ವಾಹನಗಳು ಹಳದಿ ನಂಬರ್‌ ಪ್ಲೇಟ್‌ ಹೊಂದಿರುತ್ತವೆ. ನಾವು ಬುಕ್‌ ಮಾಡಿದಾಗ ಬಿಳಿ ನಂಬರ್‌ ಪ್ಲೇಟ್‌ ಹೊಂದಿರುವ ಒಟ್ಟು 21 ವಾಹನಗಳು ಬಂದಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಹೆಚ್ಚುವರಿಯಾಗಿ ಆದಾಯ ಗಳಿಸಲು ಮಾತ್ರ ಕಾರುಗಳನ್ನು ನೀಡಿದ್ದೆವು. ಬೇರೆ ಉದ್ದೇಶ ಇರಲಿಲ್ಲ’ ಎಂದು ವಾಹನ ಮಾಲೀಕರು ತಿಳಿಸಿದ್ದಾರೆ. ‘ಖಾಸಗಿ ವಾಹನಗಳನ್ನು ಸಾರ್ವಜನಿಕ ಸೇವೆಗೆ ಬಳಸುವುದು ಸಾರಿಗೆ ನಿಯಮದ ಉಲ್ಲಂಘನೆಯಾಗುತ್ತದೆ. ವಾಹನಗಳನ್ನು ಕಾನೂನು ಬಾಹಿರವಾಗಿ ಬಳಸುವುದು ಕಂಡು ಬಂದರೆ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು’ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.