ADVERTISEMENT

ವಹ್ನಿಕುಲ ಕ್ಷತ್ರಿಯರಿಗೂ ತಿಗಳರಿಗೂ ಸಂಬಂಧವಿಲ್ಲ: ವಹ್ನಿಕುಲ ಕ್ಷತ್ರಿಯ ಸಂಘ

ತಿಗಳ ಅಭಿವೃದ್ಧಿ ನಿಗಮ ಮಂಡಳಿ ರದ್ದು ಪಡಿಸಲು ವಹ್ನಿಕುಲ ಕ್ಷತ್ರಿಯ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:59 IST
Last Updated 20 ಮಾರ್ಚ್ 2023, 20:59 IST

ಬೆಂಗಳೂರು: ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘ ಆಗ್ರಹಿಸಿದೆ.

‘ನೂತನವಾಗಿ ಸ್ಥಾಪಿಸಿರುವ ತಿಗಳ ಅಭಿವೃದ್ಧಿ ನಿಗಮದಲ್ಲಿ ತಿಗಳರಿಗೆ ಸಂಬಂಧಪಡದ ವಹ್ನಿಕುಲ ಕ್ಷತ್ರಿಯ, ಧರ್ಮರಾಜ ಕಾಪು, ಬಳ್ಳಿ, ಅಗ್ನಿಕುಲ ಕ್ಷತ್ರಿಯ ಮತ್ತು ಅದರ ಉಪಜಾತಿಗಳನ್ನು ಸೇರಿಸಲಾಗಿದೆ. ತಿಗಳ ಜಾತಿಗೂ, ಕರಗ ಹೊರುವ ವಹ್ನಿಕುಲ ಕ್ಷತ್ರಿಯರಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ಈ ನಡೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ವರ್ತೂರ್ ರವಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ವಿಚಾರಕ್ಕೆ ಸಂಬಂಧಿಸಿದ ವಿವಾದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಲ್ಲಿ ವಿಚಾರಣೆ ನಡೆಯುತ್ತಿದೆ. 2021 ರಲ್ಲಿ ಬಹಿರಂಗ ವಿಚಾರಣೆಗಳು ಕೂಡ ನಡೆದಿದೆ. ಇದೀಗ ಅಂತಿಮ ತೀರ್ಪು ಬರುವ ತನಕ ನಿಗಮ ರಚನೆಯನ್ನು ರದ್ದುಪಡಿಸಬೇಕು ಅಥವಾ ತಡೆಹಿಡಿಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತಿಗಳ ಸಮುದಾಯ ಕೇವಲ ತೂಮಕೂರು ಜಿಲ್ಲೆಯಲ್ಲಿ ಸುಮಾರು 2 ಲಕ್ಷದಿಂದ 3 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ವಹ್ನಿಕುಲ ಕ್ಷತ್ರಿಯರು ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ, ಚಾಮರಾಜನಗರ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸುಮಾರ 40 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ ಇದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.