ADVERTISEMENT

ವನಕಲ್ಲು ಮಠಕ್ಕೆ ಸುಂದರಿಯರ ದಂಡು

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:45 IST
Last Updated 16 ಜುಲೈ 2019, 19:45 IST
ವನಕಲ್ಲು ಮಠಕ್ಕೆ ಭೇಟಿ ನೀಡಿದ್ದ ಸೌಂದರ್ಯ ಸ್ಪರ್ಧೆಯ ಬೆಡಗಿಯರು 
ವನಕಲ್ಲು ಮಠಕ್ಕೆ ಭೇಟಿ ನೀಡಿದ್ದ ಸೌಂದರ್ಯ ಸ್ಪರ್ಧೆಯ ಬೆಡಗಿಯರು    

ದಕ್ಷಿಣ ಭಾರತದ ಸೌಂದರ್ಯ ರಾಣಿ–2019 ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ 32 ಬೆಡಗಿಯರ ತಂಡ (ಸೌತ್ ಇಂಡಿಯಾ ಕ್ವೀನ್ ಟೀಂ) ಇತ್ತೀಚೆಗೆ ನೆಲಮಂಗಲ ತಾಲ್ಲೂಕು ವನಕಲ್ಲು ಮಠಕ್ಕೆ ಭೇಟಿ ನೀಡಿತ್ತು. ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್‌ ಹಾಗೂ ಐ ಅಂಡ್ ಯೂ ಬೀಯಿಂಗ್ ಟುಗೆದರ್‌ ಫೌಂಡೇಷನ್‌ ಸದಸ್ಯರು ಈ ತಂಡಕ್ಕೆ ಸಾಥ್‌ ನೀಡಿದರು.ಮಠದಲ್ಲಿ ಕಲಿಯುತ್ತಿರುವ 225 ಬಡ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್‌ ಮತ್ತು ಕಲಿಕಾ ಸಾಮಗ್ರಿ ವಿತರಿಸಿದರು.

ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಯಾರು ಎಂಬ ಸುಂದರಿಯರ ಪ್ರಶ್ನೆಗೆ ಮಕ್ಕಳು ಒಕ್ಕೊರಲಿನಿಂದ ‘ಇಂದಿರಾ ಗಾಂಧಿ’ ಎಂದು ಒಂದೇ ಧ್ವನಿಯಲ್ಲಿ ಉತ್ತರಿಸಿದರು. ಹಣಕಾಸು ಸಚಿವರು ಯಾರು? ಯಾರ‍್ಯಾರು ಎರಡು ಪ್ರಧಾನಿಗಿದ್ದರು? ತ್ರಿವರ್ಣ ದ್ವಜದಲ್ಲಿನ ಚಕ್ರ ಏನನ್ನು ಸೂಚಿಸುತ್ತದೆ? ದೇಶದ ಗಡಿ ಗುರುತಿಸಿದವರು ಯಾರು? ಎಂಬ ಸುಂದರಿಯರ ಪ್ರಶ್ನೆಗಳಿಗೆ ಮಕ್ಕಳು ಫಟಾಫಟ್‌ ಉತ್ತರ ನೀಡಿದರು. ಮಕ್ಕಳ ಸಾಮಾನ್ಯ ಜ್ಞಾನ ಕಂಡು ಬೆಡಗಿಯರು ಬೆಚ್ಚಿ ಬಿದ್ದರು.

ಸುಂದರಿಯರು, ಕ್ಲಬ್ ಹಾಗೂ ಪೌಂಡೇಷನ್ ಸದಸ್ಯರುಗಳು ಮಕ್ಕಳೊಂದಿಗೆ ಬೆರೆತು ಮಕ್ಕಳಾದರು. ಗ್ರಾಮೀಣ ಆಟಗಳಾದ ಹಸು ಕರು, ಕುಂಟಾಬಿಲ್ಲೆ, ಕಬ್ಬಡಿ, ಲಗೋರಿ, ಚಿನ್ನಿದಾಂಡು, ಕೆರೆದಡ ಆಟಗಳನ್ನು ಮಕ್ಕಳೊಂದಿಗೆ ಆಡಿ ನಲಿದರು. ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ,ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್‌ ಕಾಯದರ್ಶಿ ಗೀತಾ, ಸೌಂದರ್ಯ ಸ್ಪರ್ಧೆಯ ಸ್ಪರ್ಧಿಉಜ್ವಲಾ ಮಾತನಾಡಿದರು.ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರಾಯಲ್ ಪ್ಯಾಲೇಸ್ ಅಧ್ಯಕ್ಷ ಟಿ.ಶಿವಕುಮಾರ್‌, ಚಂದ್ರಶೇಖರ್‌, ಪ್ರದೀಪ್ ಕುಮಾರ್‌, ಆಂಟೋನಿ ಜೋಸೆಫ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.