ADVERTISEMENT

2021–22ನೇ ಸಾಲಿಗೆ ₹10,265.33 ಕೋಟಿ ಪೂರಕ ಅಂದಾಜಿಗೆ ವಿಧಾನಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 22:25 IST
Last Updated 23 ಸೆಪ್ಟೆಂಬರ್ 2021, 22:25 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: 2021–22 ನೇ ಸಾಲಿಗೆ ₹10,265.33 ಕೋಟಿ ಮೊತ್ತದ ಪೂರಕ ಅಂದಾಜುಗಳ ಮೊದಲ ಕಂತಿನ ಪ್ರಸ್ತಾವನೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಸ್ತಾವನೆಯನ್ನು ಮಂಡಿಸಿದರು. ಕೇಂದ್ರ ಪುರಸ್ಕೃತ ಗ್ರಾಮೀಣ ಕುಡಿಯುವ ನೀರು (ಜಲ್‌ ಜೀವನ್ ಮಿಷನ್‌) ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ₹2,858.05 ಕೋಟಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಅನ್ನ ಭಾಗ್ಯ ಯೋಜನೆಗಾಗಿ ₹720 ಕೋಟಿ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಗೆ ₹559 ಕೋಟಿ ಮತ್ತು ಕರ್ನಾಟಕ ಆಹಾರ ನಿಗಮವು ಪಡೆದ ನಗದು ಸಾಲದ ಮೇಲಿನ ಬಡ್ಡಿ ಮರುಪಾವತಿಗೆ ₹60 ಕೋಟಿ ಸೇರಿ ₹1,339 ಕೋಟಿ ಒದಗಿಸಲಾಗಿದೆ ಎಂದರು.

ADVERTISEMENT

ಪ್ರಮುಖ ಅಂಶಗಳು
* ಕೋವಿಡ್‌ಗೆ ₹1400 ಕೋಟಿ ಒದಗಿಸಲಾಗಿದೆ. 1 ಕೋಟಿ ಡೋಸ್‌ ಕೋವಿಶೀಲ್ಡ್ ಲಸಿಕೆ ಖರೀದಿಗೆ ₹300 ಕೋಟಿ, ಔಷಧ ಮತ್ತು ಪರಿಕರಗಳ ಖರೀದಿಗೆ ₹60 ಕೋಟಿ, ಪಿಪಿಇ ಕಿಟ್‌ ಮತ್ತು ಎನ್‌–95 ಮಾಸ್ಕ್‌ ಖರೀದಿಗೆ ₹100 ಕೋಟಿ, ಕೋವಿಡ್‌ ಪರೀಕ್ಷೆಯ ಕಿರು ಪರಿಕರಗಳನ್ನು ಖರೀದಿಗೆ ₹17.72 ಕೋಟಿ ಒದಗಿಸಿದ್ದು, ಕೋವಿಡ್‌ ಔಷಧಿಯ ಹೆಚ್ಚುವರಿ ಖರೀದಿಗಾಗಿ ₹140 ಕೋಟಿ ಒದಗಿಸಲಾಗಿದೆ.

* ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಗಳಿಗಾಗಿ ₹10.37 ಕೋಟಿ ಹೆಚ್ಚುವರಿ ಅನುದಾನ, ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ₹5 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.