ಬೆಂಗಳೂರು: ಡಿಜಿಟಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ವರ್ಚುಸಾ ಕಾರ್ಪೊರೇಷನ್, ಸಿಎಸ್‍ಆರ್ ಅಡಿ ಶಿವನಹಳ್ಳಿಯ ರಾಮಕೃಷ್ಣ ಮಿಷನ್‍ನ ಶಾರದಾ ದೇವಿ ವಿದ್ಯಾಕೇಂದ್ರದ ಮಕ್ಕಳ ಅನುಕೂಲಕ್ಕಾಗಿ ಎರಡು ಎಲೆಕ್ಟ್ರಿಕ್ ಬಸ್‌ಗಳನ್ನು ಕೊಡುಗೆಯಾಗಿ ನೀಡಿದೆ.
ಶಿಕ್ಷಕರಿಗಾಗಿ 16 ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದ್ದು, ಸಭಾಂಗಣ, ನಾಲ್ಕು ಪ್ಯಾಂಟ್ರಿ ಪ್ರದೇಶ ಮತ್ತು ಶೌಚಾಲಯ ಒಳಗೊಂಡಿದೆ. 34 ಶಿಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ.
ವರ್ಚುಸಾ ಕಾರ್ಪೊರೇಷನ್‍ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ ಮಾತನಾಡಿ, ‘ವರ್ಚುಸಾ ಫೌಂಡೇಷನ್ ಮೂಲಕ ಹಲವು ಜನಪಯೋಗಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಶಿಕ್ಷಣ ಮತ್ತು ಸುಸ್ಥಿರ ಜೀವನವನ್ನು ಉನ್ನತೀಕರಿಸಿ, ಸೇವಾ ಮನೋಭಾವ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ವರ್ಚುಸಾ ಕಾರ್ಪೊರೇಷನ್‍ನ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಬಜೋರಿಯಾ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‍ನ ಸ್ವಾಮಿ ಆತ್ಮವಿದಾನಂದಜಿ ಮಹಾರಾಜ್, ರಾಮಕೃಷ್ಣ ಮಿಷನ್‍ನ ಟ್ರಸ್ಟಿ ಸ್ವಾಮಿ ಮುಕ್ತಿದಾನಂದಜಿ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.