ADVERTISEMENT

ಬಸವಲಿಂಗಯ್ಯಗೆ ವಿಶ್ವಮಾನವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 20:12 IST
Last Updated 14 ಡಿಸೆಂಬರ್ 2019, 20:12 IST
ಸಿ.ಬಸವಲಿಂಗಯ್ಯ,  ಡಾ.ಗೀತಾ ಸೀತಾ ರಾಮು, ರವೀಂದ್ರ ಭಟ್ಟ, ಮರಿಮಲ್ಲಯ್ಯ
ಸಿ.ಬಸವಲಿಂಗಯ್ಯ, ಡಾ.ಗೀತಾ ಸೀತಾ ರಾಮು, ರವೀಂದ್ರ ಭಟ್ಟ, ಮರಿಮಲ್ಲಯ್ಯ    

ಮೈಸೂರು: ದೇಜಗೌ ಟ್ರಸ್ಟ್‌ ನೀಡುವ 2019ನೇ ಸಾಲಿನ ‘ವಿಶ್ವಮಾನವ ಪ್ರಶಸ್ತಿ’ಗೆ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 25 ಸಾವಿರ ನಗದು, ಫಲಕ ಒಳಗೊಂಡಿದೆ.

‘ಶ್ರೀಮತಿ ಸಾವಿತ್ರಮ್ಮ ಮಹಿಳಾ ಪ್ರಶಸ್ತಿ’ಗೆ ಸಾಹಿತಿ ಡಾ.ಗೀತಾ ಸೀತಾ ರಾಮು ಭಾಜನರಾಗಿದ್ದು, ಪ್ರಶಸ್ತಿಯು ₹ 20 ಸಾವಿರ ನಗದು, ಫಲಕ ಒಳಗೊಂಡಿದೆ.

ಟ್ರಸ್ಟ್‌ ನೀಡುವ ‘ದಿವಂಗತ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’ಗೆ ‘ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಭಾಜನರಾಗಿದ್ದು, ಪ್ರಶಸ್ತಿಯು ₹ 15 ಸಾವಿರ ನಗದು ಹಾಗೂ ಫಲಕ ಹೊಂದಿದೆ.

ADVERTISEMENT

ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಡಾ.ದೇಜಗೌ ಹೆಸರಿನಲ್ಲಿ ನೀಡುವ ‘ಕರ್ನಾಟಕ ರತ್ನ ದೇಜಗೌ ಪ್ರಶಸ್ತಿ’ಗೆ ಮರಿಮಲ್ಲಯ್ಯ ಭಾಜನರಾಗಿದ್ದು, ಪ್ರಶಸ್ತಿಯು ₹ 20 ಸಾವಿರ ನಗದು, ಫಲಕ ಹೊಂದಿದೆ.

ಪ್ರಶಸ್ತಿಗಳನ್ನು ಡಿಸೆಂಬರ್ 29ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ಜೆ. ಶಶಿಧರ ಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.