ADVERTISEMENT

ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ; ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:04 IST
Last Updated 12 ನವೆಂಬರ್ 2020, 19:04 IST

ಬೆಂಗಳೂರು: ಮನೆಯ ಮಹಡಿ ಮೇಲೆ ನಿಂತು ಪ್ಯಾಂಟ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿ ಯುವತಿಯೊಬ್ಬರಿಗೆ ಸನ್ನೆ ಮಾಡಿದ್ದ ಆರೋಪಡಿ ರಾಣಾ ಎಂಬಾತನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

‘ಕೊಲ್ಕತ್ತಾದ ರಾಣಾ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಕೋರಮಂಗಲ ಬಳಿ ನೆಲೆಸಿದ್ದ.‌ ಲಾಕ್‌ಡೌನ್ ಇದ್ದಿದ್ದರಿಂದ ಕೆಲಸ ಹೋಗಿತ್ತು. ಹೀಗಾಗಿ, ಮನೆಯಲ್ಲೇ ಇದ್ದ’ ಎಂದು ಪೊಲೀಸರು ಹೇಳಿದರು.

‘ನ. 8ರಂದು ತನ್ನ ಮನೆಯ ಮಹಡಿ ಮೇಲೆ ನಿಂತಿದ್ದ ಆತ, ಸಮೀಪದ ಇನ್ನೊಂದು ಕಟ್ಟಡದಲ್ಲಿದ್ದ ಯುವತಿಗೆ ಸನ್ನೆ ಮಾಡಿದ್ದ. ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ. ಇದರ ವಿಡಿಯೊ ಹಾಗೂ ಫೋಟೊವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.’

ADVERTISEMENT

‘ಸಂತ್ರಸ್ತ ಯುವತಿಯೂ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಆರೋಪಿಯನ್ನು ಬಂಧಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.