ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ವಿ.ಪಿ. ಇಕ್ಕೇರಿ ಅವರನ್ನು ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರನ್ನಾಗಿ ರಾಜ್ಯ ಸರ್ಕಾರ ಸೋಮವಾರ ನೇಮಿಸಿದೆ.
ಕೆಪಿಎಸ್‌ಸಿಯಲ್ಲಿ ಅಧ್ಯಕ್ಷರು ಸೇರಿ ಒಟ್ಟು 14 ಸದಸ್ಯರಿದ್ದರು. ಈ ಪೈಕಿ, ಸದಸ್ಯರಾಗಿದ್ದ ಲಕ್ಷ್ಮೀ ನರಸಯ್ಯ ಅವರು ಸೋಮವಾರ ನಿವೃತ್ತಿಯಾದರು. ಒಂದು ಸದಸ್ಯ ಸ್ಥಾನ ಖಾಲಿಯಾದ ಹಿನ್ನೆಲೆಯಲ್ಲಿ ಇಕ್ಕೇರಿ ಅವರನ್ನು ನೇಮಿಸಲಾಗಿದೆ.
ಇಕ್ಕೇರಿ ಅವರನ್ನು ಅಧಿಕಾರಿ ಸದಸ್ಯರು ಆಗಿ ನೇಮಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.