ADVERTISEMENT

ವಿವಿ ಪುರಂ: ಶುಚಿತ್ವ ಕಾಪಾಡದ 13 ಮಳಿಗೆ ಮುಚ್ಚಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 2:39 IST
Last Updated 12 ಮಾರ್ಚ್ 2020, 2:39 IST
ವಿವಿ ಪುರಂ ಫುಡ್‌ ಸ್ಟ್ರೀಟ್‌ –ಸಂಗ್ರಹ ಚಿತ್ರ
ವಿವಿ ಪುರಂ ಫುಡ್‌ ಸ್ಟ್ರೀಟ್‌ –ಸಂಗ್ರಹ ಚಿತ್ರ   
""

ಬೆಂಗಳೂರು: ವಿ.ವಿ.ಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದಿಬದಿಯ ಆಹಾರ ಮಳಿಗೆಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದರು.

ಒಟ್ಟು 45 ಹೋಟೆಲ್‌ಗಳಿಗೆ ದಾಳಿ ನಡೆಸಿದ್ದು, ಶುಚಿತ್ವ ಕಾಪಾಡದ 13 ಮಳಿಗೆಗಳನ್ನು ಮುಚ್ಚಿಸಿದರು.

ಶುಚಿತ್ವ ಕಾಪಾಡದ ಹಾಗೂ ಕಸವನ್ನು ಮೂಲದಲ್ಲೇ ವಿಂಗಡಿಸದ ಮಳಿಗೆಗಳ ಮಾಲೀಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 65,500 ರೂಪಾಯಿದಂಡ ವಿಧಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.