ADVERTISEMENT

ಇಂದು ನಿಮ್ಹಾನ್ಸ್‌ನಲ್ಲಿ ರೋಗಿಗಳೊಂದಿಗೆ ನಡಿಗೆ

ಜನರಲ್ಲಿನ ಮೂಢನಂಬಿಕೆ ತೊಲಗಿಸಲು ಅಭಿಯಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:56 IST
Last Updated 27 ಸೆಪ್ಟೆಂಬರ್ 2019, 19:56 IST
   

ಬೆಂಗಳೂರು: ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ಮೂಢನಂಬಿಕೆಗಳನ್ನು ತೊಲಗಿಸುವ ಉದ್ದೇಶದಿಂದರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಶನಿವಾರ ‘ವಾಕಿಂಗ್‌ ಟೂರ್‌ ಇನ್‌ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.

ಬೆಳಿಗ್ಗೆ 9 ಗಂಟೆಯಿಂದ ಅಭಿಯಾನ ಪ್ರಾರಂಭವಾಗಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. 300 ಎಕರೆ ವಿಸ್ತಿರ್ಣ ಹೊಂದಿರುವ ಕ್ಯಾಂಪಸ್‌ನಲ್ಲಿನ ವಿಶೇಷಗಳ ದರ್ಶನವನ್ನು ಆಸ್ಪತ್ರೆಯ ವೈದ್ಯರು ಮಾಡಿಸಲಿದ್ದಾರೆ.

‘ರೋಗಿಗಳ ಸಾರ್ವಜನಿಕ ವಾರ್ಡ್, ವಿಶೇಷ ವಾರ್ಡ್ ನೋಡುವ ಜತೆಗೆ ರೋಗಿಗಳ ಜತೆಗೆ ಮಾತನಾಡಬಹುದು. ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರ, ಬುದ್ಧಿಮಾಂದ್ಯತೆ ಇರುವ ಮಕ್ಕಳು ನಡೆಸುವ ಕೆಫೆಯನ್ನು ನೋಡಬಹುದಾಗಿದೆ. 26 ಚಿಕಿತ್ಸಾ ವಿಭಾಗ, ಮ್ಯೂಸಿಯಂ, ಯೋಗ ಸೇರಿದಂತೆ ವಿವಿಧ ಕೇಂದ್ರಗಳ ಪರಿಚಯ ಮಾಡಿಕೊಡಲಾಗುವುದು’ ಎಂದು ಸಂಸ್ಥೆಯ ಮಾನಸಿಕ ಶಿಕ್ಷಣ ಆರೋಗ್ಯ ವಿಭಾಗದ ಪ್ರೊ.ಕೆ.ಎಸ್. ಮೀನಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.