
ಕೆ.ಆರ್.ಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಬಸವನಪುರದಲ್ಲಿ ಉದ್ಯಾನ ನಿರ್ಮಾಣಕ್ಕೆ ಶಾಸಕ ಬೈರತಿ ಬಸವರಾಜ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಬೈರತಿ ಬಸವರಾಜ, ಬಸವನಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಬಡಾವಣೆಗಳಿದ್ದು, ಸರಿಯಾದ ಉದ್ಯಾನ ಇರಲಿಲ್ಲ. ನಡಿಗೆ ಪಥ, ಜೀಮ್, ಮಕ್ಕಳು ಆಟದ ಮೈದಾನ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ತಡೆಗೋಡೆ ಸಹ ನಿರ್ಮಿಸಲಾಗುವುದು ಎಂದರು.
ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಮಾತನಾಡಿ, ಉದ್ಯಾನದ ಕಾಮಗಾರಿ ಆದಷ್ಟು ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್, ವಾರ್ಡ್ ಅಧ್ಯಕ್ಷ ಡಿ.ಜಿ.ಶಿವಕುಮಾರ್, ಮುಖಂಡರಾದ ದೇವೇಂದ್ರ, ಡಿ.ಎ.ಶ್ರೀನಿವಾಸ್, ಶ್ರೀರಾಮುಲು, ಮುನಿಸ್ವಾಮಿ, ಕೇಬಲ್ ರಾಜು, ರಾಮಚಂದ್ರ, ಗುತ್ತಿಗೆದಾರ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.