ADVERTISEMENT

ವ್ಹೀಲಿಂಗ್, ದೋಷಪೂರಿತ ಸೈಲೆನ್ಸರ್; ಗ್ಯಾರೇಜ್ ಮಾಲೀಕರ ವಿರುದ್ಧವೂ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:31 IST
Last Updated 26 ಅಕ್ಟೋಬರ್ 2020, 20:31 IST

ಬೆಂಗಳೂರು: ವ್ಹೀಲಿಂಗ್ ಹಾಗೂ ದೋಷಪೂರಿತ ಸೈಲೆನ್ಸರ್ ಪ್ರಕರಣದಲ್ಲಿ ಸಿಕ್ಕಿಬೀಳುವ ಆರೋಪಿಗಳ ಜೊತೆಗೆ, ವಾಹನಗಳನ್ನು ಬದಲಾಯಿಸಿಕೊಟ್ಟ ಗ್ಯಾರೇಜ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ಕೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

ನಗರದಲ್ಲಿ ವ್ಹೀಲಿಂಗ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಮಾಡುವವವರೂ ಜಾಸ್ತಿ ಆಗುತ್ತಿದ್ದಾರೆ. ಇಂಥ ಕೃತ್ಯಕ್ಕೆ ಗ್ಯಾರೇಜ್ ಮಾಲೀಕರು ಸಹಕರಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳುವಂತೆ ಪಂತ್ ಹೇಳಿದ್ದಾರೆ.

ಇತ್ತೀಚೆಗೆ ವ್ಹೀಲಿಂಗ್ ಮಾಡು ತ್ತಿದ್ದ ಬಾಲಕರು ಸೇರಿದಂತೆ 16 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ವ್ಹೀಲಿಂಗ್ ಮಾಡಲು ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಗ್ಯಾರೇಜ್‌ ಮಾಲೀಕನೊಬ್ಬ ಬದಲಾಯಿಸಿಕೊಟ್ಟಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.

ADVERTISEMENT

‘ವ್ಹೀಲಿಂಗ್‌ನಿಂದ ಹಲವರ ಪ್ರಾಣ ಹೋಗಿದೆ. ದೋಷಪೂರಿತ ಸೈಲೆನ್ಸರ್‌ಗಳಿಂದ ನಾನಾ ಸಮಸ್ಯೆಗಳು ಎದುರಾಗುತ್ತವೆ. ಈ ಎರಡೂ
ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾ
ಗಿದೆ. ಆರೋಪಿಗಳ ಜೊತೆ, ಕೃತ್ಯಕ್ಕೆ ಸಹಕರಿಸುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗು ವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.