ADVERTISEMENT

ಪತ್ನಿಯರ ಪ್ರಶಂಸಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 16:08 IST
Last Updated 17 ಸೆಪ್ಟೆಂಬರ್ 2019, 16:08 IST
‘ಎಂಥ ಕಷ್ಟ ಬಂದರೂ ಅನ್ಯೋನ್ಯವಾಗಿ ಬಾಳುತ್ತೇವೆ’ ಎಂದು ಪರಸ್ಪರ ಪ್ರತಿಜ್ಞೆ ಮಾಡಿದ ದಂಪತಿ 
‘ಎಂಥ ಕಷ್ಟ ಬಂದರೂ ಅನ್ಯೋನ್ಯವಾಗಿ ಬಾಳುತ್ತೇವೆ’ ಎಂದು ಪರಸ್ಪರ ಪ್ರತಿಜ್ಞೆ ಮಾಡಿದ ದಂಪತಿ    

ರಾಜರಾಜೇಶ್ವರಿನಗರ:‘ತಾಯಿಯ ನಂತರದ ಸ್ಥಾನವನ್ನು ಪತ್ನಿ ತುಂಬುತ್ತಾಳೆ. ಅವಳು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಬೇಕಾದದ್ದು ಪತಿಯ ಕರ್ತವ್ಯ’ ಎಂದು ಬೆಂಗಳೂರು ಪಂಚಶೀಲನಗರದ ಸ್ಕೈ ಸಂಸ್ಥೆಯ ಕಾರ್ಯದರ್ಶಿ ರಾಧಾಬಾಯಿ ರಾಮ್‌ಸಿಂಗ್‌ ಹೇಳಿದರು.

ವಿಶ್ವ ಶಾಂತಿ ಮತ್ತು ಪತ್ನಿಯ ಪ್ರಶಂಸಾ ದಿನದ ಅಂಗವಾಗಿ ಸಂಸ್ಥೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನಸ್ಸುಗಳ ಮಧ್ಯೆ ಸಾಮರಸ್ಯ, ಸಹಮತ ಮೂಡಿ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ನಿರ್ಧಾರ ಪತಿ–ಪತ್ನಿ ನಡುವೆ ಮೂಡಿದಾಗ ಮಾತ್ರ ಆದರ್ಶ ಜೀವನ ಸಾಧ್ಯ’ ಎಂದರು.

‘ಎಷ್ಟೇ ಕಷ್ಟ ಬಂದರೂ ಒಂದಾಗಿ ಬಾಳುತ್ತೇವೆ’ ಎಂದು 119 ದಂಪತಿ ಪ್ರತಿಜ್ಞೆ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.